ಬೆಳಾಗವಿ 01- ವೈದ್ಯಕೀಯ ಕ್ಷೇತ್ರದಲ್ಲಿ ಬೆಳಗಾವಿಯ. ಕೆ.ಎಲ್.ಇ.ಸಂಸ್ಥೆ ಪ್ರಪಂಚದಲ್ಲಿ ಹೆಸರು ಗಳಿಸಿದ್ದು, ಪ್ರತಿಭಾನ್ವಿತ ವೈದ್ಯರು ಹೆಚ್ಚುತ್ತಿರುವದು ಮತ್ತು ಇಂಥ ಪ್ರತಿಭಾನ್ವಿತರಿಗೆ ಕೊಡುತ್ತಿರುವ. ಸಂಸ್ಥೆಯ ಪ್ರೋತ್ಸಾಹವೇ ಕಾರಣವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಮಾನವನ ಜೀರ್ಣಾಂಗ ಕ್ರಿಯೆಗೆ ಸಂಬಂದಿತ ರೋಗಗಳಿಗೆ ಕೊರತೆ ಇರುವ ಬೆಳಗಾವಿ ನಾಡಿನ ಗ್ಯಾಸ್ಟ್ರೋ ಎಂಟ್ರಾಲಾಜಿ ಕ್ಷೇತ್ರಕ್ಕೆ, ಎಂ.ಸಿ.ಎಚ್ ವೈದ್ಯ ಅಕ್ಕತಂಗೇರಹಾಳ ದ ಡಾ ಕಿರಣ ಉರಬಿನಹಟ್ಟಿಹೊಸ ಭಾಷ್ಯ ಬರೆದಿದ್ದು, ಈ ನಾಡಿನ ಅತೀ ಹೆಮ್ಮೆ ಇದಾಗಿದೆಯಲ್ಲದೆ ಅವರ ವಿಶಿಷ್ಟ ಅಧ್ಯಯನ ಅಪ್ರತಿಮ ಎಂದು ಬೆಳಗಾವಿ ನಿವ್ರತ್ತ. ಪ್ರಾದೇಶಿಕ ಆಯುಕ್ತ ಮತ್ತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಅವರು ಬುಧವಾರ ಬೆಳಗಾವಿ ಕ್ಲಬ್ ರಸ್ತೆಯ ಸಿವಿಲ್ ಆಸ್ಪತ್ರೆ ಎದುರಿಗಿರುವ ಗಣೇಶ ಹೆಲ್ತ್ ಕೇರ್ ಮಲ್ಟಿ ಸ್ಪೇಶಾಲಿಟಿ ಪಾಲಿ ಕ್ಲಿನಿಕ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಗ್ಯಾಸ್ಟ್ರೋ ಕ್ಲಿನಿಕ್ ನ್ನು ರಿಬ್ಬನ್ ಕತ್ತರಿಸುವ ಮೂಲಕ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು
ಮಾಡುವ ಮನಸ್ಸು ಮತ್ತು ಇಡುವ ದಿಟ್ಟ ಹೆಜ್ಜೆಗಳು ಸಾಧಕರಿಗೆ ಪೂರಕವೆನಿಸುತ್ತವೆ. ಜೀರ್ಣಾಂಗ ಕ್ರಿಯೆಗೆ ಸಂಬಂದಿತ ರೋಗಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬಲ್ಲ ಈ ವೈದ್ಯರು ಅನ್ನನಾಳ, ಜಠರ, ಸಣ್ಣ ಮತ್ತು ದೊಡ್ಡ ಕರಳು, ಯಕ್ರತ್ತು, ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಕೊಡಬಲ್ಲವರಾಗಿದ್ದು ಈ ನಾಡಿಗೆ ಸಿಕ್ಕ ಸೌಭಾಗ್ಯ ಇದಾಗಿದೆ ಎಂದರು.
ಎಮ್. ಸಿ.ಎಚ್.ವೈದ್ಯ ಡಾ ಕಿರಣ ಉರಬಿನಹಟ್ಟಿ ಪ್ರತೀಕ್ರಿಯಿಸಿ , ನಾನು ಕೆ.ಎಲ್.ಇ ಸಂಸ್ಥೆಗೆ ಯಾವತ್ತೂ ಚಿರರುಣಿ. ಅದೇ ಸಂಸ್ಥೆಯಲ್ಲಿ ನಾನೀಗ ಸೇವೆ ಸಲ್ಲಿಸುತ್ತಿದ್ದು, ಗಣೇಶ ಹೆಲ್ತ್ ಕೇರ್ ಮಲ್ಟಿ ಸ್ಪೇಶಾಲಿಟಿ ಪಾಲಿ ಕ್ಲಿನಿಕ್ ನ. ನೆರಳಲ್ಲಿ ನನ್ನದೇ ಅದ ಕ್ಲಿನಿಕ್ ಉದ್ಘಾಟಿಸಿ ಪ್ರೋತ್ಸಾಹಿಸಿದ್ದಕ್ಕೆ ಹಿರೇಮಠ ರಿಗೆ ಮತ್ತು ಡಾ ಡಿ ಎನ್ ಮಿಸಾಳೆ ಮತ್ತು ಜಗದೀಶ ಮಠದ ಅವರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರೇಮಠ ಅವರಿಗೆ ಕ್ಲಿನಿಕ್ ಪರವಾಗಿ ಡಾ ಕಿರಣ ಉರಬಿನಹಟ್ಟಿ ಮತ್ತು ಡಾ. ಸ್ನೇಹಾ ಉರಬಿನಹಟ್ಟಿ ಹೂಗುಚ್ಛ ನೀಡಿ ಅಭಿನಂದಿಸಿದರು. ಡಾ. ಸುನಿಲ್ ಗಿಡಮುಡಿ, ಡಾ ಡಿ. ಎನ್. ಮಿಸಾಳೆ ಮತ್ತು ರಾಜ್ಯ ಎಸ್.ಪಿ.ಸಿ.ಸದಸ್ಯ ಜಗದೀಶ ಮಠದ, ಬಸವರಾಜ ಇಂಗಳಗಿ, ಅರ್ಜುನ್ ಉರಬಿನಹಟ್ಟಿ, ಸೇರಿದಂತೆ ಉರಬಿನಹಟ್ಟಿ, ಪರಿವಾರದ. ನಿರ್ಮಲಾ, ಸುವರ್ಣಾ , ಪ್ರಿಯಾಂಕಾ, ಡಾ ಸ್ನೇಹಾ ಕಡ್ಡಿ, ಕಮಲಾ ಇಂಗಳಗಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.