ನೇಗಿನಹಾಳ30: ನಮ್ಮ ಕ್ಷೇತ್ರದ ಜನತೆ ಬಿಜೆಪಿ ಪಕ್ಷದ ಮೇಲೆ ಬಹಳಷ್ಟು ಆಸೆ- ಆಕಾಂಕ್ಷೆ, ಭರವಸೆಗಳನ್ನು ಇಟ್ಟುಕೊಂಡು ಹಾಗೂ ಹಿಂದುತ್ವದ ಅಜೆಂಡಾ
ಗಳಿಗೆ ಮನಸೋತು ಸುಮಾರು ೩೫ ವರ್ಷಗಳ ಗೆಲ್ಲಿಸಿತು ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಯಿತು. ಇದರಿಂದ ಕಿತ್ತೂರು ನಾಡಿನ ಜನತೆ ಬೇಸತ್ತಿದ್ದಾರೆ
ಜೊತೆಗೆ ಕಾಂಗ್ರೆಸ್ ಪಕ್ಷ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿತು ಅದರಂತೆ ಜನಸಾಮಾನ್ಯರಿಗೆ
ತಲುಪಿಸಿದೆ ಇಗ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಬಹುಮತ ಪಡೆದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ವರ್ಷಕ್ಕೆ ಲಕ್ಷ ರೂ, ಯುವಕರಿಗೆ ಉದ್ಯೋಗ
ಭರವಸೆಯಂತಹ ನೂರಾರು ಯೋಜನೆಗಳನ್ನು ಜಾರಿ ತರಲಿದೆ ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷದ ಅಬ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು
ಗೆಲ್ಲಿಸಬೆಕೆಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಗ್ರಾಮದ ತಮ್ಮ ಸ್ವ ಗೃಹದಲ್ಲಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಅಂಜಲಿ ನಿಂಬಾಳ್ಕರ್, ಶಂಕರ ಹೊಳಿ, ಕಾಶೀನಾಥ ಇನಾಮದಾರ, ರೋಹಿಣಿ ಪಾಟೀಲ, ನಾನಾಸಾಹೇಬ ಪಾಟೀಲ, ಮಡಿವಾಳಪ್ಪ ಕುಲ್ಲೋಳ್ಳಿ, ಮಹಾದೇವಿ ಕೋಟಗಿ, ಕೃಷ್ಣಾಜಿ ಕುಲಕರ್ಣಿ, ಬಸನಗೌಡ ಪಾಟೀಲ,
ಶಿವಾನಂದ ದಿವಾಣದ, ರುದ್ರಪ್ಪ ಬೋಳೆತ್ತಿನ, ಶಿವಾನಂದ ಕುಂಕೂರ, ಈರಣ್ಣಾ ಉಳವಿ, ಚಿದಾನಂದ ಬೆಳಗಾವಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ಮಡಿವಾಳಪ್ಪ ಮರಿತಮ್ಮನವರ ನಿರೂಪಿಸಿ ವಂದಿಸಿದರು.
ನೇಗಿನಹಾಳ ಗ್ರಾಮದ ತಮ್ಮ ಸ್ವಗೃಹದಲ್ಲಿ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ಮಾತನಾಡಿದರು.
ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಗ್ರಾಮದ ಮಹಿಳೆಯರು ಉಡಿ ತುಂಬುವ ಮೂಲಕ ಸತ್ಕರಿಸಿದರು.