ಗದಗ,28. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಹತ್ಯೆ ಮಾಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು ಸಿಎಂ ಅವರ ಹೇಳಿಕೆ
ತಪ್ಪಿತಸ್ಥರನ್ನು ನಿಂಧಿಸುವುದನ್ನು ಬಿಟ್ಟು ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಮೊನ್ನೆ ಮಂಗಳೂರಿನಲ್ಲಿ ಕುಕ್ಕರ ಸ್ಫೋಟ ನಡೆದಾಗ ಇದೊಂದು ಸಣ್ಣ ಘಟನೆಯೇ ಹೊರತು ಭಯೋತ್ಪಾದಕರ ದಾಳಿಯಲ್ಲ ಎಂದು ಉಪಮುಖ್ಯಮಂತಿಗಳ ಹೇಳಿಕೆಯಿಂದ ಕಾಂಗ್ರೇಸ ಸರಕಾರ ರಾಜ್ಯದ ಕಾನೂನು ಸುವ್ಯವಸ್ಥೆಯ ಹಾಗೂ ಜನತೆಯ ಸಂರಕ್ಷಣೆ ವಿಷಯದಲ್ಲಿ ಎಷ್ಟು ಜಾಗೃತರು ಎಂಬುವುದು ಈಗ ಜನರಿಗೆ ಅರ್ಥವಾಗಿದೆ ಅದಕ್ಕೆ ಜನತೆ ಸರಿಯಾದ ಉತ್ತರ ನೀಡುತ್ತಾರೆ
ಎಂದು ಗದಗ ಜಿಲ್ಲಾ ಬಿಜೆಪಿ ಪಕ್ಷದ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರು, ವಕೀಲರು ಕೆ. ಪಿ. ಕೋಟಿಗೌಡರ ಸರಕಾರದ ನಡೆಯನ್ನು ಖಂಡಿಸಿದರು.
ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದರು.
ಈ ಕೋಲೆ ಘಟನೆಗೆ ಸಂಬಂಧಿಸಿದಂತೆ ಸಿಎಂ ನಡೆ ಅತ್ಯಂತ ದುರದೃಷ್ಟಕರ. ಸಂತ್ರಸ್ತೆಯ ಕುಟುಂಬಕ್ಕೆ ಸಂತಾಪ ಹಾಗೂ ರಕ್ಷಣೆ ನೀಡುವ ಬದಲು ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಅವರು ಹೇಳಿಕೆ ರಾಜ್ಯಾದ್ಯಂತ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಕೆಂಗಣಿಗೆ ಗುರಿಯಾಗಿದೆ. ಕರ್ನಾಟಕದಲ್ಲಿ
ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಎಂಟಕ್ಕೂ ಹೆಚ್ಚು ಕೊಲೆಗಳು ನಡೆದಿವೆ. ಆದರೆ ಯಾವುದೇ ಕ್ರಮ ಕೈಗೊಳ್ಳಲ್ಲದೇ ರಾಜ್ಯ ಗೃಹ ಸಚಿವರು ಕೂಡ ಅದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ರಾಜ್ಯ ಸರಕಾರ ಕಾನೂನು ಸುವ್ಯವಸೆ ಹದಗೆಟ್ಟಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ&#೩೯; ಎಂದು ಅವರು ಮಾತನಾಡಿದರು.
ಕರ್ನಾಟಕ-ಕೇರಳ ಗಡಿಭಾಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿರುವ ಕಾರಣ ಅಕ್ಕಪಕ್ಕದ ಪ್ರದೇಶಗಳಲ್ಲಿ
ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿಲಾಗಿದೆ ಇಂತಹ ಪ್ರಕರಣಗಳು ಕಾಂಗ್ರೇಸ ಆಡಳಿತದಲ್ಲಿ ಹೆಚ್ಚು ಇದಕ್ಕೆ ನಿರ್ಲಕ್ಷ ಆಡಳಿತದ ವೈಖರಿಯೇ ಕಾರಣ ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸೆ ಹದಗೆಟ್ಟಿದೆ ಕಾಂಗ್ರೆಸ್ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಸಿಬ್ಬಂದಿಯನ್ನು ಹಾಗೂ ಎನ್ ಎಸ್ ಜಿ ಕಮಾಂಡೋ ಪಡೆಯ ಭಾರಿ ಭದ್ರತೆ ಪ್ರಧಾನಿ ರ್ಯಾಲಿಗೆ ನಿಯೋಜಿಸಲಾಗಿತ್ತು ಇಂತಹ ಭಧ್ರತೆಯಲ್ಲಿ ಇವರು ಹೇಗೆ ನುಸುಳಿದರು ಇದಕ್ಕೆ ಕಾಂಗ್ರೇಸ ಸರಕಾರದ ಕುಮತ್ತು ಇದೇ ದೇಶದ ಪ್ರಧಾನಿ ಎಷ್ಟು ಮುಖ್ಯ ಅವರ ಭದ್ರತೆ ಎಷ್ಟು ಸೂಕ್ಷ್ಮ ಎಂಬುದು ಈ ರೀತಿಯ ಘಟಣೆಗಳು
ಜರುಗುತ್ತಿರುವುದು ವಿಷಾಧನೀಯ ಇದನ್ನೇಲ್ಲ ಅರಿತ ರಾಜ್ಯದ ಜನತೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹಿರಿಯ ವಕೀಲರು ಎಸ್.ಎಸ್.ಹಿರೇಮಠ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಿ.ಆರ್. ವಡಕಣ್ಣವರು, ಡಿ.ಎಮ್. ಡಾವಣಗೇರಿ, ಎಮ್.ಎ. ಸಂಗನಾಳ, ಎಸ್.ಎ. ರಮಣಿ, ಜಿ.ಎಮ್. ಸಂಶಿ, ಜೋಸೆರ್ಪ ಉದೋಜಿ, ರಾಜೀವ ಡ್ರ್ರಾಳ್ಳಿ, ಮಂಜುನಾಥ ಅರವಟಿಗಿ, ಕೆ.ಎಫ್. ದೋಡ್ಡಮನಿ, ಸುರೇಶ ಹಂಚಿನಾಳ, ಎಸ್.ವಾಯ್. ಕಲ್ಲಪೂರ, ಕಿರಣ ಮುಶಿಗೇರಿ ಸೇರಿದಂತೆ ಬಿಜೆಪಿ-ಜೆಡಿಎಸ್ ಪಕ್ಷದ ವಕೀಲರು ಹಾಗೂ ಗದಗ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರು ಉಪಸ್ಥಿತರಿದ್ದರು.