ಬಾಗಲಕೋಟೆ 27: ಎಸ್‌ಸಿ,ಎಸ್‌ಟಿ ಮತ್ತು ಒಬಿಸಿ ಅವರ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್ಸ ಹಾಗೂ ಇಂಡಿ ಮೈತ್ರಿಕೂಟದ ಗುಪ್ತ ಅಜೆಂಡಾ ಆಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿ ಶನಿವಾರ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ಯ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
ನರೇಂದ್ರ ಮೋದಿ ಬಡವರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇದೆ ಎಂದು ಹೇಳಿದರೆ, ಕಾಂಗ್ರೆಸ್ಸ ಹಾಗೂ ಇಂಡಿ
ಮೈತ್ರಿಕೂಟ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳುತ್ತಿರುವ ಉದ್ದೇಶವೇನು, ಕಾಂಗ್ರೆಸ್ಸ ಎಸ್‌ಸಿ,ಎಸ್‌ಟಿ ಮತ್ತು ಒಬಿಸಿಯನ್ನು
ದ್ವೇಷಿಸುತ್ತಿದೆ ಮತ್ತು ಅವರ ಪ್ರಣಾಳಿಕೆಯಲ್ಲಿಯೂ ತುಷ್ಟೀಕರಣದ ರಾಜಕಾರಣ ಸ್ಪಷ್ಟವಾಗಿಗೋಚರಿಸುತ್ತಿದೆ, ಮುಸ್ಲಿಂ ಸಮುದಾಯಕ್ಕೆ ಓಬಿಸಿ ಮಿಸಲಾತಿ ಕಲ್ಪಿಸಿರುವರುವುದು ದುರದೃಷ್ಠಕರವಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಓಬಿಸಿ ಮಿಸಲಾತಿ ಕಲ್ಪಿಸಿರುವ ರಾಜ್ಯ ಸರಕಾರಕ್ಕೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸಮನ್ಸ್ ಕಳಿಸಿರುವ ಬಗ್ಗೆ ನಿನ್ನೆಯ ಪತ್ರಿಕೆಯಲ್ಲಿ ವರಿದಿಯಾಗಿದೆ, ಈ ಕುರಿತು ಜನರು ಏಚ್ಚರದಿಂದರಬೇಕು, ಭಾರತದಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜೀವನ ನಡೆಸಿದ್ದು ಎಲ್ಲ ವರ್ಗಗಳ ಹಿತ ಕಾಯೋದು ಸರಕಾರಗಳ
ಜವಾಬ್ದಾರಿ ಎಂದರು.
ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ಬಿಜೆಪಿ ಮುನ್ನೆಡೆದಿದ್ದು, ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಗುತ್ತಿದ್ದು, ದೇಶದ ಹಿತವೆ ಎಲ್ಲರ ಹಿತವಾಗಿದ್ದು ಪ್ರಧಾನಿ
ಮೋದಿಯನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡಿ ಎಂದರು.
ಪಾದಯಾತ್ರೆಯಲ್ಲಿ ಬಸವರಾಜ ಯಂಕಂಚಿ, ಲಕ್ಷ್ಮೀ ನಾರಾಯಣ ಕಾಸಟ್, ಮಹೇಶ ಕಕರೆಡ್ಡಿ, ಈರಣ್ಣ ಅಥಣಿ,ಮಹಾಂತೇಶ ಶೆಟ್ಟರ,
ರುದ್ರು ಅಕ್ಕಿಮರಡಿ, ಮಹೇಶ ಅಂಗಡಿ, ಗುರುಬಸವ ಸೂಳಿಭಾವಿ,ಶಂಕರಣ್ಣ ಯಾದವಾಡ, ಪಂಡಿತ ಅರೆಬ್ಬಿ, ಎಮ್.ಎಮ್.ಹಂಡಿ, ಬಸವರಾಜ ಪರ್ವತಿಮಠ, ಮುತ್ತಣ್ಣ ಬೆಣ್ಣೂರ, ನಗರಸಭೆ ಸದಸ್ಯೆ ಭುವನೇಶ್ವರಿ ಕುಪ್ಪಸ್ತ, ಶೋಭಾ ರಾವ್, ಭಾಗ್ಯಶ್ರೀ ಹಂಡಿ, ಯಮುನಾ ಜೋಷಿ, ಭಾರತಿ ಪಾಟೀಲ, ದ್ಯಾಮಣ್ಣ ಜಲಗೇರಿ, ಸುರೇಶ ವಸ್ತ್ರದ. ಸುರೇಂದ್ರ ಜೋಷಿ, ಬನಪ್ಪ ಮಡಿವಾಳರ, ಪ್ರಕಾಶ ಹಾಲವಾರ, ಶಿವಾನಂದ ಕುಂಬಾರ, ಲಕ್ಷ್ಮಣ ಹಡಪದ, ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ವಿದ್ಯಾಗಿರಿಯ ೩೨ ನೇ ವಾರ್ಡಿನಲ್ಲಿ ಬರುವ ೧೧ ರಿಂದ ೧೬ ನೇ ರಸ್ತೆಗಳಲ್ಲಿ ಬರುವ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಮಾಡಲಾಯಿತು.