ಬೆಳಗಾವಿ,27: ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ-ಧಾರವಾಡ-ತೆಲಂಗಾಣ ಹಾಗೂ ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಬೆಳಗಾವಿ ಸಹಯೋಗದಲ್ಲಿ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ್ ದೇಸಾಯಿ ಅವರ ಸಂಸ್ಮರಣೆಯ ಪ್ರಯುಕ್ತ ದಿನಾಂಕ ೨೮-೦೪-೨೦೨೪ ರವಿವಾರ ಬೆಳಗ್ಗೆ ೧೦ ಗಂಟೆಗೆ ಕನ್ನಡ ಸಾಹಿತ್ಯ ಭವನ ಚೆನ್ನಮ್ಮ ವೃತ್ತ, ಬೆಳಗಾವಿಯಲ್ಲಿ ಕನ್ನಡ ನುಡಿ ತೇರು ೨೦೨೪ ಕಾರ್ಯಕ್ರಮ ಜರುಗುತ್ತಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿದ್ಯಾಧರ ಮುತಾಲಿಕ ದೇಸಾಯಿ ಅವರು ವಹಿಸಿಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಉಪನ್ಯಾಸ ಹಾಗೂ ಪ್ರತಿಷ್ಠಾನದಿಂದ ಕೊಡಮಾಡಲ್ಪಡುವ ೨೦೨೩ ನೇ ಸಾಲಿನ ಮಾತೋಶ್ರೀ ಜಾನಕಿಬಾಯಿ ರಂಗರಾವ್ ದೇಸಾಯಿ ಪ್ರಶಸ್ತಿ ೨೦೨೩, ಕನ್ನಡ ಮಹಿಳಾ ಚೇತನ ಪ್ರಶಸ್ತಿ, ಕನ್ನಡ ಸೇನಾನಿ ಪ್ರಶಸ್ತಿ, ಕನ್ನಡ ಸಾಹಿತ್ಯ ಚೇತನ ಪ್ರಶಸ್ತಿ, ಕನ್ನಡ ಭೂಷಣ ಪ್ರಶಸ್ತಿ, ಕನ್ನಡ ಪ್ರತಿಭಾ ದೀಪ್ತಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುವದು ಈ ಪ್ರಶಸ್ತಿಗಳಿಗೆ ಕ್ರಮವಾಗಿ ಶ್ರೀ ಶಿವಾಜಿ ಕಾಗಣಿಕರ, ಕೊಟ್ಟಣಬಾವಿ. ಶ್ರೀಮತಿ ಮಂಗಲಾ ಮೆಟಗುಡ್ಡ ಬೈಲಹೊಂಗಲ. ಶ್ರೀ ಮ.ಯ.ಮೆಣಸಿನಕಾಯಿ ಬೆಳಗಾವಿ. ಶ್ರೀ ಸ.ರಾ.ಸುಳಕೊಡೆ ಬೆಳಗಾವಿ. ಶ್ರೀ ಆರ್.ಬಿ.ಬನಶಂಕರಿ. ಶ್ರೀಮತಿ ಶೋಭಾ ಬಸವರಾಜ ಮೇಟಿ ಮುಂಡರಗಿ ಇವರುಗಳು ಬಾಜನರಾಗಿದ್ದಾರೆ.
ಕಾವ್ಯೋದ್ಯೋಗ ಎಂಬ ವಿಷಯದ ಮೇಲೆ ಉಪನ್ಯಾಸ ಹಾಗೂ ಕವಿಗೋಷ್ಠಿ ಹಾಗೂ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವಿಗಳಿಗೆ ಬಹುಮಾನ ವಿತರಣೆ ಜರುಗುತ್ತಿದ್ದು, ವಿಶೇಷವಾಗಿ ಕನ್ನಡ ಕಾವ್ಯಗಳಲ್ಲಿ ಮುಂಡಿಗೆಯ ಪ್ರಕಾರ ಎಂಬ ವಿಷಯದ ಮೇಲೆ ಡಾ.ಶ್ಯಾಮಲಾ ಪ್ರಕಾಶ್ ಸಂಗೀತ ವಿಧೂಷಿಗಳು ಹಾಗೂ ಸಾಹಿತಿಗಳು ಮಾತನಾಡಲಿದ್ದಾರೆ. ಮಾತಿನೊಳಗನ ಧಾತು, ಕಥೆ ಹೇಳುವೆ ಮತ್ತು ಆಯ್ದ ಇತರ ಕಥೆಗಳು ಎಂಬ ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ಕನ್ನಡ ಮನಸುಗಳಿಗೆ ವಿದ್ಯಾಧರ ಕನ್ನಡ ಪ್ರತಿಷ್ಠಾನವು ಹೃದಯಪೂರ್ವಕ ಸ್ವಾಗತ ಬಯಸುತ್ತದೆ.