ಬೈಲಹೊಂಗಲ,27: ನಾಟಕಗಳಲ್ಲಿ ಬರುವ ಪಾತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಅದರಲ್ಲಿರುವ ಒಳ್ಳೆಯತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟದಾರಿಯನ್ನು ತೇಜಿಸಿ ಮುನ್ನೆಡೆಯಲಿಕ್ಕೆ ಸಹಕಾರಿಯಾಗಿವೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಜರುಗಿದ ಹಳ್ಳಿಯ ಹುಲಿ ಕೊಟ್ಟ ಬೆಳ್ಳಿಯ ಕಾಲುಂಗುರ ನಾಟಕ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯಲ್ಲಿರುವ ಕಲೆಯನ್ನು ಹೊರ ತರಲು ಹಾಗೂ ಪ್ರೇಕ್ಷಕರ ಮನಸ್ಸಿಗೆ ಮನರಂಜನೆ ನೀಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಯುವ ನಾಟ್ಯ ತಂಡಗಳು ನಾಟಕಗಳನ್ನು ಜಾತ್ರಾ ಮಹೋತ್ಸವ ದಲ್ಲಿ ಆಯೋಜನೆ ಮಾಡುತ್ತಿರುವದು ಶ್ಲಾಘನೀಯ.
ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್ ಬಳಕೆಯಿಂದ ಗ್ರಾಮೀಣ ಕಲೆ ನಶಿಸುತಿದ್ದು ಯುವಕರು ಜೀವನದಲ್ಲಿ ನಿರುತ್ಸಾಹ ಹೆಚ್ಚಾಗುತ್ತಿದ್ದು ದುಶ್ಚಚಟಗಳಿಗೆ ಅಂಟಿಕೊಳ್ಳುತ್ತಿರುವದು ಕಳವಳಕಾರಿಯಾಗಿದೆ. ಯುವ ಶಕ್ತಿ ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರುತ್ತಾ ಸಂಸ್ಕಾರಯುತವಾಗಿದ್ದರೆ ಸಮಾಜ ಸ್ವಸ್ಥ್ಯದಿಂದ ಇರುತ್ತದೆ ಎಂದರು.
ಶಿಕ್ಷಕ ಈರಣ್ಣ ಬೆಂಡಿಗೇರಿ ಮಾತನಾಡಿ, ಹುಟ್ಟಿದ ಸಂದರ್ಭದಲ್ಲಿ ಬಡತನವಿದ್ದರು ಅದು ನಿಮ್ಮ ತಪ್ಪಲ್ಲ. ಅದನ್ನು ಮೆಟ್ಟಿನಿಂತು ಜೀವನ ಸಾಗಿಸಬೇಕು. ದೇವರು ಕೊಟ್ಟ ಈ ಜನ್ಮದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಾಧನೆಯತ್ತ ಯುವಶಕ್ತಿ ಸಾಗಬೇಕಾಗಿದೆ. ಆದರೆ ಅನೇಕ ಯುವಕರು ತಮ್ಮ ಜೀವದ ಕಷ್ಟಗಳನ್ನು ಎದುರಿಸಾಲಗದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿರುವದು ಅತ್ಯಂತ ದುರದೃಷ್ಟಕರ. ಆದ್ದರಿಂದ ಅಂತಹ ದಾರಿಯಲ್ಲಿ ಸಾಗದೆ ಕ್ರಿಯಾಶೀಲತೆಯಿಂದ ಸ್ವಯಂ ಕಾರ್ಯದಲ್ಲಿ ತೊಡಗಿಕೊಂಡು ಉದ್ಯೋಗಶಿಲರಾಗಬೇಕೆಂದರು.
ಗುರು ಮಡಿವಾಳೇಶ್ವರ ಮಠದ ಪೀಠಾದಿಪತಿ ಗಂಗಾಧರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಡಿ.ಸಂಗಣ್ಣವರ, ಗದಿಗೆಪ್ಪ ಬೆಂಡಿಗೇರಿ, ಶಂಕರ ಕಳ್ಳಿ, ಎಸ್.ಕೆ.ಮೆಳ್ಳಿಕೇರಿ, ಸುರೇಶ ಬಾಳೆಕುಂದರಗಿ, ಗುರಶಾಂತಯ್ಯ ಹೀರೆಮಠ, ಪುಂಡಲಿಕ ನಾಗನೂರ, ಶ್ರೀಶೈಲ ಬಾಳೆಕುಂದರಗಿ, ಮಲ್ಲಿಕಾರ್ಜುನ ಸಂಪಗಾಂವ, ಬಸವರಾಜ ವೀವೆಕಿ, ಆನಂದ ಮತ್ತಿಕೊಪ್ಪ, ಆನೆಪ್ಪ ಬಾಳೆಕುಂದರಗಿ, ನಿಂಗಪ್ಪ ಆರೇರ, ಈರಯ್ಯ ಹೀರೆಮಠ, ಕುಮಾರ ಗಣಾಚಾರಿ, ಮಲ್ಲಿಕಾರ್ಜನ ವಿವೇಕಿ, ಶಂಕರ ಲಂಗೋಟಿ, ಕಿರಣ ಬಾಳೆಕುಂದರಗಿ,ಮಡಿವಾಳಪ್ಪ ಆರೇರ, ಮಲ್ಲಪ್ಪ ಯರಡಾಲ, ಈರಣ್ಣ ಬಾಳೆಕುಂದರಗಿ, ಮಡಿವಾಳಪ್ಪ ಕಕ್ಕೆರಿ, ಶ್ರೀಕಾಂತ ಹೀರೆಮಠ, ಕಾರೆಪ್ಪ ಬಾಳೆಕುಂದರಗಿ, ನಾಗಪ್ಪ ಆರೇರ, ಮಹಾಂತೇಶ ಮೂಲಿಮನಿ,ಮಂಜು ಬಾಳೆಕುಂದರಗಿ, ಈರಪ್ಪ ಆರೇರ, ಮಹೇಶ ಸಂಗೋಳ್ಳಿ, ಸಂತೋಷ ಆರೇರ, ಬಸವರಾಜ ಕಕ್ಕೇರಿ, ಶಿವಪ್ಪ ಬಾಳೆಕುಂದರಗಿ, ಶ್ರೀಶೈಲ ಆರೇರ, ಫಕೀರ ಜಾಧವ, ಮಹಾಂತೇಶ ಅವರಾಧಿ, ಮಂಜುನಾಥ ಪೇಂಟೆದ, ಸಂಜು ಪಾಟೀಲ, ಮಂಜುನಾಥ ಕಳ್ಳಿ, ಮಡಿವಾಳಪ್ಪ ಬಾಳೆಕುಂದರಗಿ, ಇದ್ದರು.
ಗ್ರಾಪಂ ಸದಸ್ಯ ಬಸವರಾಜ ಬಾಳೆಕುಂದರಗಿ ಸ್ವಾಗತಿಸಿದರು. ಗಜಾನನ ಆರೇರ ನಿರೂಪಿಸಿದರು.