ಬೆಳಗಾವಿ,ಏ25: ಜಿಲ್ಲೆಯ ಯರಗಟ್ಟಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವದ ಹಾಗೂ ೧೫ನೇ ವರ್ಷದ ವೇದಾಂತ ಪರಿಷತ್ ಮತ್ತು ಪೂಜ್ಯ ಶ್ರೀ ಗಣಪತಿ ಮಹಾರಾಜರ ೬೩ನೇ ಜಯಂತ್ಯೋತ್ಸವ ಮಹಾತ್ಮರ ಬೆಳ್ಳಿ ರಥೋತ್ಸವಹಾಗೂ ಶ್ರೀ ದೇವಿಯ ರಥೋತ್ಸವ ಕಾರ್ಯಕ್ರಮ ಜರುಗಲಿದೆ. ಮೇ ೧೩ರಿಂದ ೧೪ರವರೆಗೆ ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅಕ್ಷಯ ತೃತೀಯ ಶುಕ್ರವಾರ ಮೇ ೧೦ ರಂದು ಬೆಳಿಗ್ಗೆ ೫ ಗಂಟೆಗೆ ಚಂಡಿ ಹೋಮ ಹವನಗಳಿಂದ ಹಾಗೂ ಶ್ರೀ ದೇವಿಯ ಮಹಾ ಅಭಿಷೇಕ ಅಲಂಕಾರ ಮಹಾಪೂಜೆ ನೆರವೇರುವುದು.
ಸೋಮವಾರ ಮೇ ೧೩ ರಂದು ದೇವಿಯ ಮಹಾ ಅಭಿಷೇಕ, ಅಲಂಕಾರ ಪೂಜೆ ನೆರವೇರುವುದು. ದೇವಿಯ ಪಲ್ಲಕ್ಕಿ ಉತ್ಸವ, ಮಹಾ ಪ್ರಸಾದ ವ್ಯವಸ್ಥೆ ಇದೆ. ಸಂಜೆ ೪ ಗಂಟಗೆ ಭಕ್ತಿ ಸಂಗೀತ ಸೇವೆ, ೭ ಗಂಟೆಗೆ ಸಕಲ ಮಹಾತ್ಮಕ ಸಾನಿಧ್ಯ, ವೇದಾಂತ ವೇದಿಕೆ ಉದ್ಘಾಟನೆ, ಹಾಗೂ ಮಹಾತ್ಮರ ತತ್ವ ಚಿಂತನೆ ನಡೆಯಲಿದೆ.
ದಿವ್ಯ ಸಾನಿಧ್ಯವನ್ನು ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸಲಿದ್ದಾರೆ. ಪಾವನ ಸಾನಿಧ್ಯವನ್ನು ಮುರಗೋಡ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಲ್ಲಾಪುರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಮಿಗಳು ವಹಿಸಲಿದ್ದಾರೆ. ತೋಂಡಿಕಟ್ಟಿ ಮಠದ ಅಭಿನವ ಶ್ರೀ ವೆಂಕಟೇಶ ಮಹಾರಾಜರು ಹಾಗೂ ಸವಟಗಿಯ ನಿಂಗಯ್ಯ ಮಹಾಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ ಬೆಳವಿಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ.
ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಕಿರಿಟ ಪೂಜೆ ಮಹಾಪೂಜೆ ನಡೆಯಲಿದೆ. ತುಲಾಭಾರ, ಪೂಜೆ, ಪುನಸ್ಕಾರ ಕಾರ್ಯಕ್ರಮಗಳು ನಡೆಯಲಿವೆ.
ಮೇ ೧೪ ರಂದು ದೇವಿಗೆ ಹಾಲಿನ ಅಭಿಷೇಕ, ಅಲಂಕಾರ ಮಹಾಪೂಜೆ, ಬೆಳಿಗ್ಗೆ ಭಕ್ತಿ ಸಂಗೀತ ಸೇವೆ, ೯ ಗಂಟೆಗೆ ವೇದಾಂತ ಮಹಾತ್ಮರಿಂದ ಹಿತೋಪದೇಶ ಚಿಂತನೆ ನಡೆಯಲಿದೆ.
ಶ್ರೀ ಗಣಪತಿ ಮಹಾರಾಜರ ೬೩ನೇ ಹುಟ್ಟುಹಬ್ಬ ಹಾಗೂ ಕಿರೀಟ ಧಾರಣೆ, ಮಧ್ಯಾಹ್ನ ಮಹಾ ಪ್ರಸಾದ ಸಾಯಂಕಾಲ ೫ ಗಂಟೆಗೆ ದೇವಿ ರಥೋತ್ಸವ ನಡೆಯಲಿದೆ. ವಿಶೇಷ ಆಮಂತ್ರಿತರಿಗೆ ಹಾಗೂ ದಾನಿಗಳಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪೀಠಾಧಿಕಾರಿಗಳು ಗಣಪತಿ ಮಹಾರಾಜರು ರಾಜೇಶ್ವರಿ ಆಶ್ರಮ ಯರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.