ಬಿಜೆಪಿಯವರು ಚೌಕ್ ಗಾಲಿ ಉರುಳಿಸುತ್ತಾರೆ, ಎಲ್ಲರಿಗೂ ಗೊತ್ತು ಅದು ಉರುಳುವದಿಲ್ಲ: ಸವದಿ ವಾಗ್ದಾಳಿ

Ravi Talawar
ಬಿಜೆಪಿಯವರು ಚೌಕ್ ಗಾಲಿ ಉರುಳಿಸುತ್ತಾರೆ, ಎಲ್ಲರಿಗೂ ಗೊತ್ತು ಅದು ಉರುಳುವದಿಲ್ಲ: ಸವದಿ ವಾಗ್ದಾಳಿ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
WhatsApp Group Join Now
Telegram Group Join Now

ಅಥಣಿ,24: ಪ್ರತಿ ಬಾರಿ ಚುನಾವಣೆ ಬಂದಾಗ ಬಿಜೆಪಿ ಪಕ್ಷದವರೂ ಹೊಸ ಚೌಕ್ ಗಾಲಿ ಉಳಿಸುತ್ತಾರೆ, ಜನರನ್ನು ದಿಕ್ಕು ತಪ್ಪಿಸಿ ಮತ ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಅವರ ಬಣ್ಣ ಬಯಲಾಗಲಿದೆ, ಸೋಲಿನ ಭಯದಿಂದ ಚಾರಸೋ ಪಾರ್ ಅನ್ನುವ ವಾಕ್ಯವನ್ನು ಬಿಜೆಪಿ ಹೇಳುತ್ತಿದೆ, ಆದರೆ 200ಕ್ಕಿಂತ ಕಡಿಮೆ ಸೀಟ್‌ಗಳು ಅವರಿಗೆ ಬರುತ್ತವೆ, ಕಾಂಗ್ರೇಸ್ ಮೈತ್ರಿಕೂಟ ಸರಕಾರ ರಚನೆ ಮಾಡುವದು ಖಚಿತ ಎಂದು ಶಾಸಕ ಹಾಗೂ ಕಾಂಗ್ರೇಸ್ ಸ್ಟಾರ್ ಪ್ರಚಾರಕ ಲಕ್ಷö್ಮಣ ಸವದಿ ಹೇಳಿದರು.

ಅವರು ಸೋಮವಾರ 22ರಂದು ಸಂಜೆ ಪಟ್ಟಣದ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡ ಕಾಂಗ್ರೇಸ್ ಪಕ್ಷದ  ಕಾರ್ಯಕರ್ತರ ಸಭೆಯನ್ನ ಉದ್ಧೇಶಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಈ ಬಾರಿ ಗೆಲ್ಲುವದು ಖಚಿತ, ಬಿಜೆಪಿಯವರು ನಮಗೆ ಅನಕೂಲಕರ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಈಗ ಚುನಾವಣೆ ಪ್ರಚಾರ ಆರಂಭವಾಗಿದೆ ಚಿಕ್ಕೋಡಿ ಲೋಕಸಭೆಯ ವ್ಯಾಪ್ತಿಯಲ್ಲಿಯ 8 ವಿಧಾನಸಭೆ ಮತಕ್ಷೇತ್ರಗಳಲ್ಲಿಯೆ ಅಧಿಕ ಮತಗಳನ್ನ ಕಾಂಗ್ರೇಸ್‌ಗೆ ನೀಡಿರುವ ಕ್ಷೇತ್ರ ಅಥಣಿ ಮತಕ್ಷೇತ್ರ  ನಮ್ಮ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಯವರನ್ನ 80ಸಾವಿರಕ್ಕೂ ಅಧಿಕ ಮತಗಳ ಲೀಡದಿಂದ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾರ್ಯಕರ್ತರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಕಾರ್ಡಗಳನ್ನ ಮನೆ ಮನೆಗೆ ತಲುಪಿಸಿ ಅವರ ಅಭಿಮತ ಸಂಗ್ರಹಣೆ ಮಾಡಿ ಸರ್ಕಾರ ನುಡಿದಂತೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ತಲುಪಿವೆ ಇಲ್ಲವೋ ತಿಳಿಯಿರಿ.

ಬಿಜೆಪಿ ಪ್ರಣಾಳಿಕೆ ಸುಳ್ಳು ಭರವಸೆ: ಬಿಜೆಪಿಯ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಆಸ್ವಾಸನೆಯ ಮೇಲೆ ಜನರ ವಿಶ್ವಾಸ ಹೊಗಿದೆ ಹೀಗಾಗಿ ಹತಾಶರಾಗಿ ಅಬ್ ಕಿ ಬಾರ 400 ಪಾರ್ ಎನ್ನುವ ಮಾತು ಕೇಳಿ ಬರುತ್ತಿವೆ ಆದರೆ ಇಡೀ ದೇಶದಲ್ಲಿ ಸುಮಾರು 70ರಿಂದ 100 ಬಿಜೆಪಿ ಅಭ್ಯರ್ಥಿಗಳು ಸೋಲುವ ಮುನ್ಸೂಚನೆ ಸಿಕ್ಕಿದೆ ಅದಕ್ಕೆ ಅವರು ಹತಾಶರಾಗಿ ಹೇಳಿಕೆ ನೀಡುತಾ ಹೊರಟಿದ್ದಾರೆ. ಜನರು ಬುದ್ದಿವಂತರಿದ್ದಾರೆ ಈಗಾಗಲೆ 10ವರ್ಷಗಳಿಂದ ಅಧಿಕಾರ ಅನುಭವಿಸಿ ಮತ್ತೆ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಬಡಜನರ ಬದುಕಿಗೆ ಹಿತವಾದ ಒಂದು ಕಾರ್ಯಕ್ರಮ ಇಲ್ಲದಂತಾಗಿದೆ ಕೇವಲ ಹಿಂದೂತ್ವ, ಧರ್ಮ, ದೇಶ ರಕ್ಷಣೆ ವಿಷಯ ಬಿಟ್ಟರೆ ಬೇರೆ ಏನೂ ಇಲ್ಲ ಏಕೆ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ರಕ್ಷಣೆ ಆಗುವುದಿಲ್ಲವೋ ಎಂದು ಲಕ್ಷö್ಮಣ ಸವದಿ ಪ್ರಶ್ನಿಸಿದರು.

ಹಿರಿಯ ಮುಖಂಡ ಎಸ್.ಕೆ.ಬುಟಾಳಿ ಮಾತನಾಡಿ ಕಳೇದ 5 ವರ್ಷಗಳಲ್ಲಿ ಈಗಿನ ಸಂಸದ ಜೊಲ್ಲೆಯವರು ಯಾವುದೇ ಕಾಮಗಾರಿ ಮಾಡಿಲ್ಲ ಮತ್ತು ಜನರಿಗೆ ಭೆಟ್ಟಿನೀಡಿ ಕಷ್ಟ ಸುಖಗಳಿಗೆ ಸ್ಪಂದಿಸಿಲ್ಲ ಕೇವಲ ತಮ್ಮ ಪತ್ನಿ ಕ್ಷೇತ್ರವಾದ ನಿಪ್ಪಾಣಿ ಕ್ಷೇತ್ರಕ್ಕೆ ಆದ್ಯತೆ ನಿಡಿದ್ದಾರೆ ಹೊರತು ಉಳಿದ ಕ್ಷೇತ್ರಗಳನ್ನ ಮರೆತಿರುವದರಿಂದ ಅವರಿಗೆ ತಕ್ಕಪಾಠ ಜನರು ಕಲಿಸುತ್ತಾರೆ ಯುವ ಅಭ್ಯರ್ಥಿ ಪ್ರಿಯಂಕಾ ಗೆಲುವು ಖಚಿತವೆಂದರು.

ಪಕ್ಷದ ಮುಖಂಡರಾದ ಸಿದ್ದಾರ್ಥ ಸಿಂಗೆ,ಸುರೇಶ ಮಾಯನ್ನವರ, ಡಿ.ಬಿ.ಠಕ್ಕಣವರ, ಶ್ಯಾಮ ಪೂಜಾರಿ, ಶಿವು ಗುಡ್ಡಾಪೂರ, ಶ್ರೀಕಾಂತ ಅಸ್ಕಿ ಮಾತನಾಡಿ ದೇಶದ ವಿಮಾನ ನಿಲ್ದಾಣ ಖಾಸಗಿಕರಣ ಮಾಡಿದ್ದಾರೆ ಅಂಬಾನಿ, ಅದಾನಿ,ಬಿರ್ಲಾ ಅಂತ ಶ್ರೀಮಂತರಿಗೆ ಮಣೆ ಹಾಕುವ ಕೇಂದ್ರ ಸರ್ಕಾರ ನಮಗೆ ಬೇಡ ಬಡಜನರ ಆಸೋತ್ತರಗಳಿಗೆ ಸ್ಪಂದಿಸುವ ರೈತರ, ಮಹಿಳೆಯರ, ನಿರುದ್ಯೋಗಿ ಯುವಕರ ಬದುಕಿಗೆ ಆಸರೆಯಾಗುವ ಕಾಂಗ್ರೇಸ್ ಒಕ್ಕೂಟದ ಸರ್ಕಾರ ರಚನೆಯಾಗಲು ಕಾಂಗ್ರೇಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದರು.

ಈ ವೇಳೆ ಮುಖಂಡರಾದ, ಚಿದಾನಂದ ಸವದಿ, ಕೆ ಎ ವಣಜೋಳ, ಸುರೇಶ ಮಾಯಣ್ನವರ, ಅಮೊಘ ಕೊಬ್ಬರಿ, ಸದಾಶಿವ ಬುಟಾಳಿ, ಅನೀಲ ಸುನದೂಳಿ, ಶಿವಾನಂದ ದಿವಾನಮಳ, ಗುರು ದಾಸ್ಯಳ, ಶ್ಯಾಮ ಪುಜಾರಿ, ಸುರೇಶಗೌಡಾ ಪಾಟೀಲ, ಅಸ್ಲಮ ನಾಲಬಂದ, ಪ್ರಕಾಶ ಮಾಹಜನ, ಶ್ರೀ ಶೈಲ ನಾಯಿಕ, ಚಿದಾನಂದ ಮುಕಣಿ, ಶಾಂತಿನಾಥ ನಂದೇಶ್ವರ, ರಾಜು ನಾಡಗೌಡ, ರವಿ ಬಡಕಂಬಿ, ಪುರಸಭೆ ಮಾಜಿ ಅಧ್ಯಕ್ಷ ದಿಲಿಪ ಲೋಣಾರೆ, ಸದಸ್ಯರಾದ ದತ್ತಾ ವಾಸ್ಟರ, ಸಂತೋಷ ಸಾವಡಕರ, ರಾಜು ಗುಡ್ಡೂಡಗಿ, ಸಯ್ಯದ್ ಅಮೀನ ಗದ್ಯಾಳ, ರಾವಸಾಹೇಬ ಐಹೊಳೆ, ಆಶಿಫ ತಾಂಬೂಳಿ, ತಿಪ್ಪಣಾ ಭಜಂತ್ರಿ, ರಿಯಾಜ ಸನದಿ, ವಿಲಿನರಾಜ ಯಳಮಲ್ಲೆ, ರಮೇಶ ಸಿಂದಗಿ, ಮಹಾಂತೇಶ ಠಕ್ಕಣ್ಣವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

 

WhatsApp Group Join Now
Telegram Group Join Now
Share This Article