ಯರಗಟ್ಟಿ : ೨೩ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಿ.ಸಿ.ಟ್ರಸ್ಟ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ ಬೆಳಗಾವಿ-೨ ಇವರ ಮೂಲಕ ಮತದಾರ ಬಾಂಧವರೇ ಜಾಗೃತಿ ಎಂಬ ಕರ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ದಿ.೨೦ ರಂದು ಟ್ರಸ್ಟ ಕಛೇರಿ ಆವರಣದಲ್ಲಿ ಜರುಗಿತು.
ಕರ ಪತ್ರವನ್ನು ಜಿಲ್ಲಾ ಯೋಜನಾಧಿಕಾರಿ ಲವಕುಮಾರ ಬಿಡುಗಡೆಮಾಡಿ ಇದೇ ಮೇ ೭ ರಂದು ನಡೆಯುವ ಲೋಕಸಭಾ ಚುಣಾವನೆ ಸಂದರ್ಭದಲ್ಲಿ ಮುಗ್ದ ಜನರಿಗೆ ಮದ್ಯ ಕುಡಿಸಿ ಆಮಿಷ ನೀಡಿ ಮತ ಪಡೆಯಬಹುದು ಅಂಥ ಪ್ರಯತ್ನ ಎಲ್ಲೆ – ಯರಿಂದಲೆ ನಡೆದಲ್ಲಿ ಬಲವಾಗಿ ವಿರೋಧಿಸಿ. ಮದ್ಯ ಪಡೆದು ಮತ ಹಾಕಿದಲ್ಲಿ ಮದ್ಯಕ್ಕೆ ತಮ್ಮನ್ನು ತಾವು ಮಾರಿಕೊಂಡಂತೆ, ಸೌಭಿಮಾನದಿಂದ ಮತ ಹಾಕಿ, ಕರ್ನಾಟಕದಲ್ಲಿ ಉತ್ತಮ ಆಡಳಿತ ನಡೆಸಲು ಯೋಗ್ಯ ಪ್ರತಿನಿಧಿ ಆರಿಸಿ, ಮದ್ಯಮುಕ್ತ ಸಮಾಜ ನಿರ್ಮಾನಕ್ಕೆ ಶ್ರಮಿಸಿ ಅವರಿಂದ ಉತ್ತಮ ಪ್ರತಿನಿಧಿ ಪಡೆದುಕೊಳ್ಳಿ , ಈ ಸಂದೇಶ ತಮ್ಮ ಅಕ್ಕ-ಪಕ್ಕದವರಿಗೂ , ಬಂಧು-ಮಿತ್ರರಿಗೂ ತಿಳಿಸಿ, ಸದೃಡ, ದುಶ್ಚಟರಹಿತ ಪಾರದರ್ಶಕ ಆಡಳಿತವನ್ನು ರೂಪಿಸಲು ಸಹಕರಿಸಿ ಎಂದು ತಿಳಿಸಿದರು.
ಧಾರವಾಡ ಪ್ರಾದೇಶಿಕ ಯೋಜನಾಧಿಕಾರಿ ಎನ್.ಭಾಸ್ಕರ ಮಾತನಾಡಿ ಈ ಗ್ರಾಮಾಭಿವೃದ್ದಿ ಯೋಜನೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು ಇಲ್ಲಿ ಸವದತ್ತಿ, ಯರಗಟ್ಟಿ, ರಾಮರ್ದು ಮತ್ತು ಗೋಕಾಕ ೧ ಹಾಗೂ ೨ ಘಟಕಗಳಲ್ಲಿ ನಡೆಯುತ್ತಿದ್ದು, ಸಮಾಜಕ್ಕೆ ಎಲ್ಲ ಜಾತಿ-ಧರ್ಮದ ಎಲ್ಲ ವಯಸ್ಸಿನ ಮಹಿಳೆಯರಿಗೆ-ಪುರುಷರಿಗೆ ಉಪಯುಕ್ತವಾಗುವ ಕಾರ್ಯಗಳನ್ನು ಮಾಡುತ್ತಿದೆ ಸನ್.೨೦೨೩-೨೪ ನೇ ಸಾಲಿನಲ್ಲಿ ೨೨ ಯೋಜನೆಗಳನ್ನು ಅನಿಷ್ಠಾನಗೊಳಿಸಿ ಸುಮಾರು ೪ ಸಾವಿರ ಫಲಾನಿಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ೧೦ ಯೋಜನೆಗಳಾದ ತರಬೇತಿ, ಸಭೆಗಳು, ಸದಸ್ಯರ ಆಯ್ಕೆ ಹೀಗೆ ೩೧೫ ಫಲಾನುಭವಿಗಳ ಉಪಯೊಗವಾಗಿದೆ. ಸನ್ ೨೦೨೪-೨೫ ಕ್ಕೆ ೧೪ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ ಚುಣಾವನೆ ನಂತರ ಕಾರ್ಯರೂಪಕ್ಕೆ ಬರುತ್ತವೆ ಎಂದರು.
ಜನಜಾಗೃತಿ ವೇದಿಕೆ ಉಪಾದ್ಯಕ್ಷ ಈರನಗೌಡಾ ಪಾಟೀಲ, ಸಂಸ್ಥಾಪಕ ಅದ್ಯಕ್ಷ ಸೋಮಶೆಖರ ಮಗ್ದುಮ ಮಾತನಾಡಿದರು. ಈ ವೇಳೆ ಎಲ್ಲ ಕ್ಷೇತ್ರ ಪ್ರತಿನಿಧಿಗಳು ಉಪಸ್ಥಿತರಿದ್ದರು.