ಹುಬ್ಬಳ್ಳಿ, ಏಪ್ರಿಲ್ 23: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ನ್ಯಾಯದಾನ ವಿಳಂಬ ಆಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಅವರ ಮನೆಗೆ ತೆರಳಿದ ಎಚ್ಕೆ ಪಾಟೀಲ್ ಅವರು, ನೇಹಾ ತಂದೆ, ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಸರ್ಕಾರದಿಂದ ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪಲಿದೆ ಎಂದರು.
ಹತ್ಯೆ ಪ್ರಕರಣ ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಹುಬ್ಬಳ್ಳಿಗೆ ಬರಲಾಗಲಿಲ್ಲ. ಇವತ್ತು ನಿರಂಜನ್ ಹಿರೇಮಠ್ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ, ಅವರು ನಿರಂಜನ್ ಅವರಿಗೆ ಸಾಂತ್ವನ ಹೇಳಿದರು.
ನೇಹಾ ಸಾವಿಗೆ ಬಹುಬೇಗ ಸಾವಿಗೆ ನ್ಯಾಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿನ ಈ ಬರ್ಬರ ಹತ್ಯೆ ಮತ್ತು ಸಮಾಜದ ಮುಖಂಡರ ಭೇಟಿ ವೇಳೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ತೀರ್ಮಾನಿಸಿದೆ. ನಮ್ಮ ಕರ್ತವ್ಯ ನಿಭಾಯಿಸಿ ನಾವು ಹಿರೇಮಠ್ ಅವರ ಮನೆಗೆ ಬಂದಿದ್ದೇವೆ. ವೈಯಕ್ತಿಕ ಘಟನೆ ಎಂಬ ಹೇಳಿಕೆ ಕುರಿತು ಗೃಹ ಸಚಿವ ಮತ್ತು ಸಿಎಂ ತಮ್ಮ ಸಮಾಜಯಿಸಿ ಹೇಳಿದ್ದಾರೆ ಎಂದರು.
ಇನ್ನೂ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಸಮಜಾಯಿಸಿ ನೀಡಿದ್ದಾರೆ. ಆದರೆ ತಕ್ಷಣವೇ ನಮ್ಮ ಸರ್ಕಾರ ಸ್ಪಂದಿಸಿದೆ. ನಾನು ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಮಾತನಾಡಿದ್ದೇನೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಸ್ಪಷ್ಟಪಡಿಸಿದ್ದಾರೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಿದ್ದಾರೆ. ಜೊತೆಗೆ ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಎಲ್ಲ ಮುಖಂಡರು ನಮ್ಮ ಪರ ನಿಂತಿದ್ದಾರೆ . ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಣಾಯಕ್ಕೆ ಧನ್ಯವಾದ ಹೇಳುತ್ತೇನೆ. ಕಾನೂನಿನ ಬಗ್ಗೆ ನನಗೆ ಗೊತ್ತಿಲ್ಲ ನನ್ನ ಬೆನ್ನ ಹಿಂದೆ ಸರ್ಕಾರ ಕೆಲಸ ಮಾಡಿದೆ ಎಂದರು.
ಮುಖ್ಯಮಂತ್ರಿಗಳು ಸಾಂತ್ವನ ಹೇಳಲು ಹುಬ್ಬಳ್ಳಿಗೆ ಬರೋದಾಗಿ ಹೇಳಿದ್ದಾರೆ. ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ ಪೊಲೀಸ್ ಆಯುಕ್ತರ ಬಗ್ಗೆಯೂ ತಪ್ಪಾಗಿ ಮಾತನಾಡಿದ್ದೇನೆ. ಇದೆಲ್ಲವು ದುಃಖದಲ್ಲಿ ಮಾತನಾಡಿದ್ದೇನೆ. ನನ್ನ ಎಲ್ಲರು ಕ್ಷಮಿಸಿವಿಶೇಷ ಕೋರ್ಟ್ ಗೆ ನೇಹಾ ಹಿರೇಮಠ್ ಅಂತ ಹೆಸರಿಡಬೇಕು, ಕಾಯ್ದೆ ಗೂ ಅವರ ಹೆಸರಿಡಿ ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಸರ್ಕಾರದಲ್ಲಿ ಮನವಿ ಮಾಡಿಕೊಂಡರು.
ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸದ್ಯಕ್ಕೆ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲಾಗಿದೆ. ಅವರ ತಂಡ ಹೇಗೆ ತನಿಖೆ ಮಾಡುತ್ತಾರೆ ಮಾಡಲಿ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆದಿರುವುದು ನನಗೆ ಗೊತ್ತಾಗಿದೆ. ಮಾಹಿತಿ ಕೊರತೆಯಿಂದ ಮಾತನಾಡಿದ್ದೇನೆ. ಈ ಸಂಬಂಧ ಪೊಲೀಸ್ ಇಲಾಖೆಯ ಕ್ಷಮೆ ಕೇಳುತ್ತೇನೆ. ನಾನು ಆತಂಕದಲ್ಲಿ ಕೆಲ ಹೇಳಿಕೆ ನೀಡಿದ್ದೆ. ಪ್ರಕರಣದಲ್ಲಿ ಸರ್ಕಾರ ಕಾಣದ ಕೈ ರೀತಿಯಲ್ಲಿ ಕೆಲಸ ಮಾಡಿದೆ. ಕಾಂಗ್ರೆಸ್ ನಾಯಕರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿದ್ಯಾರ್ಥಿನಿಯರು ನಿರ್ಭಯವಾಗಿ ಕಾಲೇಜಿಗೆ ಹೋಗುವಂತಾಗಬೇಕು ಎನ್ನುವುದೇ ನನ್ನ ಆಸೆ ಎಂದು ನಿರಂಜನ್ ಹಿರೇಮಠ ಅವರು ಹೇಳಿದರು.