ಗದಗ, 22 : ಗದಗನಲ್ಲಿ ನಡೆದ ನಾಲ್ವರ ಹತ್ಯೆ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನಗರದ ದಾಸರ ಗಲ್ಲಿಯಲ್ಲಿ ನಡೆದಿದ್ದ ಮರ್ಡರ್ ಕೇಸ್ ನ ಕೊಲೆಗಾರರನ್ನು ಬಂದಿಸುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ಸಿಯಾಗಿದ್ದಾರೆಂದು ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
72 ಗಂಟೆಯಲ್ಲಿ ಪ್ರಕರಣ ಭೇದಿಸಿದ ಗದಗ ಎಸ್ ಪಿ ಬಿ. ಎಸ್ ನೇಮಗೌಡ ತಂಡದ ಕಾರ್ಯ ಪ್ಪ್ರಶಂಸಿದರು. ಪ್ರಕಾಶ್ ಬಾಕಳೆ ಹಿರಿಯ ಪುತ್ರ ವಿನಾಯಕ ಸೇರಿ ಎಂಟು ಜನರ ಬಂಧಿಸಲಾಗಿದೆ. ತಂದೆ ಪ್ರಕಾಶ್ ಬಾಕಳೆ, ಮಲತಾಯಿ ಸುನಂದಾ ಬಾಕಳೆ, ಮಲ ಸಹೋದರ ಕಾರ್ತಿಕ್ ಕೊಲೆಗೆ ಪ್ರಕಾಶ್ ಬಾಕಳೆ ಹಿರಿಯ ಪುತ್ರ A1 ವಿನಾಯಕ್ ಬಾಕಳೆ (35) ಸುಪಾರಿ ನೀಡಿದ್ದ ಎಂದು ತಿಳಿಸಿದರು.
ಗದಗ ನಗರದ A2 ಫೈರೋಜ್ ಖಾಜಿ(29), ಗದಗನ ಜಿಶಾನ್ ಖಾಜಿ(24), ಮೀರಜ್ ನ ಸಾಹಿಲ್ ಖಾಜಿ(19), ಸೋಹೆಲ್ ಖಾಜಿ(19), ಮೀರಜ್ ಮೂಲದ ಸುಲ್ತಾನ್ ಶೇಖ್(23), ಮಹೇಶ್ ಸಾಳೋಂಕೆ(21), ವಾಹಿದ್ ಬೇಪಾರಿ(21) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಫೈರೋಜ್ ಖಾಜಿಗೆ 65 ಲಕ್ಷ ರೂಪಾಯಿಗೆ ಸುಪಾರಿ ಡೀಲ್ ಕೊಟ್ಟಿದ್ದ ವಿನಾಯಕ್ ಬಾಕಳೆ ,ಮುಂಗಡವಾಗಿ ಎರಡು ಲಕ್ಷ ರೂಪಾಯಿ ಕೊಟ್ಟಿದ್ದ ಎಂದು ವಿಚಾರಣಿಯಲ್ಲಿ ತಿಳಿದು ಬಂದಿದೆ.
ಹಿರಿಯ ಮಗನ ಹೆಸರಲ್ಲಿ ಸಾಕಷ್ಟು ಆಸ್ತಿ ಮಾಡಿದ್ದ ತಂದೆ ಪ್ರಕಾಶ್ ಬಾಕಳೆ ಮಧ್ಯ ವ್ಯವಹಾರಿಕವಾಗಿ ವೈಮನಸ್ಸಿನ ಹಿನ್ನೆಲೆ ಕೊಲೆ ನಡೆದಿವೆ ಎನ್ನಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಪ್ರಕಾಶ್ ಗಮನಕ್ಕೆ ತಾರದೆ ಕೆಲ ಆಸ್ತಿಯನ್ನು ಮಗ ವಿನಾಯಕ್ ಮಾರಿದ್ದ, ಈ ವರ್ತನೆಗೆ ಬೇಸತ್ತು ಜಗಳವಾಡಿದ್ದ ಪ್ರಕಾಶ್ ಬಾಕಳೆ ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಪ್ರಕಾಶ್, ಹೆಂಡತಿ ಸುನಂದಾ, ಪುತ್ರ ಕಾರ್ತಿಕ್ ನನ್ನ ಹತ್ಯೆ ಮಾಡಲು ಪ್ಲಾನ್ ಮಾಡಿ, ಮೀರಜ್ ಮೂಲದ ಸಾಹಿಲ್ ಸೇರಿ ಐವರ ಟೀಂಗೆ ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು. ಕೃತ್ಯ ನಡೆದು 72 ಗಂಟೆಯಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೊಲೆ ಪ್ರಕರಣ ಬೇದಿಸಿದ್ದಕ್ಕೆ ಡಿಜಿ, ಐಜಿಪಿ ಅಲೋಕ್ ಕುಮಾರ್ ಶ್ಲಾಘನೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್ ಪಿ ಬಿ. ಎಸ್. ನೇಮಗೌಡ ಸೇರಿದಂತೆ ಗದಗ ಪೊಲೀಸರ ತಂಡ ಉಪಸ್ಥಿತರಿದ್ದರು.