ಮುಗಳಖೋಡ: 22: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಲ್ಲೆ, ಕೊಲೆಗಳು ಈ ದೇಶಕ್ಕೆ ಮಾರಕವಾದದ್ದು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಭಾವನೆಗಳಿಗೆ ಸ್ಪಂದಿಸಿ ಅತಿ ಶೀಘ್ರವಾಗಿ ನೇಹಾಳನ್ನು ಕೊಲೆಗೈದ ಹಂತಕನನ್ನು ಗಲ್ಲಿಗೇರಿಸಬೇಕೆಂದು ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಗಣಪತಿ ದೇವಸ್ಥಾನದ ಮುಂದೆ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಂಗಮ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಇನ್ನು ಮುಂದೆ ದೇಶದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಯುವಕ, ಯುವತಿಯರು ಹಾಗೂ ಎಲ್ಲರೂ, ಸಾಮಾಜಿಕ ಮಾಧ್ಯಮಗಳ ಗೋಜಿಗೆ ಹೋಗದೆ ತಂದೆ ತಾಯಿ ನೀಡುವ ಸಂಸ್ಕಾರದ ಜೀವನ ನಿಮ್ಮದಾಗಬೇಕೆಂದರು.
ವೈ ಚಂದ್ರು ಕುಲಿಗೋಡ ಫಯಾಜನನ್ನು ಜೈಲಿನಲ್ಲಿ ಇಡುವುದಕ್ಕಿಂತ ಸಾರ್ವಜನಿಕ ಸ್ಥಳಗಳಲ್ಲಿ ತಂದು ಸೂಟೌಟ್ ಮಾಡಬೇಕೆಂದು ತಮ್ಮ ಆಕ್ರೋಶ ಹೊರಹಾಕಿದರು. ಭೀಮಸಿ ಬನಶಂಕರಿ ಮಾತನಾಡಿ ವಿವಿಧ ಸಂಘಟನೆಗಳ ಮೂಲಕ ಪಕ್ಷಾತೀತವಾಗಿ ಹಮ್ಮಿಕೊಂಡ ಈ ಪ್ರತಿಭಟನೆ ಆರೋಪಿ ಫಯಾಜ್ಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಿ, ಹತ್ಯೆಯಾದ ನೇಹಾಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ನ್ಯಾಯಕ್ಕಾಗಿ ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಹಂತಕ ಫಯಾಜ್ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಮನವಿ ಸಲ್ಲಿಸಿ. ಕು. ನೇಹಾ ಹಿರೇಮಠರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
“ಕು. ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಮುಗಳಖೋಡ ಪಟ್ಟಣದ ವಿವಿಧ ಸಂಘಟನಾಕಾರರು ಸಲ್ಲಿಸಿರುವ ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗುವುದು”- “ರೇಣುಕಾ ದೇಸಾಯಿ” ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ
ಮುಪ್ಪಯ್ಯ ಹಿರೇಮಠ, ಸುರೇಶ ಹೊಸಪೇಟಿ, ರಮೇಶ ಯಡವನ್ನವರ, ಗೌಡಪ್ಪ ಖೇತಗೌಡರ, ಗೋಪಾಲ ಯಡವನ್ನವರ, ಶ್ರೀಪಾಲ ಕುರುಬಳ್ಳಿ, ರಾಜಶೇಖರ ನಾಯಕ, ಮಹಾಂತೇಶ ಯರಡತ್ತಿ, ಶಿವಾನಂದ ಮುಧೋಳ,ಲತಾ ಹುದ್ದಾರ, ನಾಗಪ್ಪ ಹುಕ್ಕೇರಿ, ಆನಂದ ಯರಡತ್ತಿ, ಸಂಗಯ್ಯ ಹಿರೇಮಠ, ಸಿದ್ದಮಲ್ಲಯ್ಯಾ ಮಠಪತಿ, ಸಿದ್ದಯ್ಯ ಕರಡಿ, ಸೋಮಯ್ಯ ಹಿರೇಮಠ, ಹನುಮಸಾಹೇಬ ನಾಯಕ, ಶ್ರೀಶೈಲ ಶೇಗುಣಸಿಮಠ, ಪರಗೌಡ ಖೇತಗೌಡರ, ಶಿವಯ್ಯ ಮಠಪತಿ, ಗಣೇಶ ಮಠಪತಿ, ಮಲ್ಲಿಕಾರ್ಜುನ ಮಠಪತಿ, ಶಿವಪ್ಪ ಹಳ್ಳುರ, ವಿಠ್ಠಲ ಯಡವನ್ನವರ, ಸಿದ್ರಾಮಯ್ಯ ಮಠಪತಿ, ರಮೇಶ ಕಲ್ಲಾರ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಉಪಸ್ಥಿತರಿದ್ದರು.