ಗದಗ,ಏಪ್ರಿಲ್ 22 ಕಾರ್ಯಕರ್ತರಿಂದಲೇ ಪಕ್ಷ ಎಂದು ಕಾರ್ಯಕರ್ತರೋಂದಿಗೆ ಸಂವಾದ ನಡೆಸಿ ಮೋದಿ ಸರಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತ ಪರ ಕಾಳಜಿಯಿಂದ ರೈತ ವಿದ್ಯಾನಿಧಿ ಎಂಬ ಯೋಜನೆ ಮೂಲಕ ರೈತ ಮಕ್ಕಳ ಶಿಕ್ಷಿತರಾಗಿಲಿ ಎಂಬ ದೂರು ದೃಷ್ಠಿ ಯೋಜನೆ ರೂಪಿಸಿದ್ದರು.
ರೈತ ಫಸಲ ಭೀಮಾಯೋಜನೆ ಮೂಲಕ ರೈತರಿಗೆ ಕಷ್ಠಕಾಲದಲ್ಲಿ ಬೇನ್ನೆಲುಬುಗಾಗಿ ನೀತಿದೆ ಹಾಗಾಗಿ ರೈತರ ಉಳಿವಿಗಾಗಿ ಬಿಜೆಪಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಹೆಚ್ಚು ಬಹುಮತದಿಂದ ಗೆಲಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರು ಮಾಜಿ ಶಾಸಕರು ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು.
ಅವರು ಪಕ್ಷದ ಕಾರ್ಯಲಯದಲ್ಲಿ ಜರುಗಿದ ರೈತ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಪಾರ್ಟಿ ಸಂಘಟನೆ ದೃಷ್ಠಿಯಿಂದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ಮೆರಾ ಬೂತ್ ಸಬಸೇ ಮಜಬೂತ್ ಹೇ ಎಂಬುವಂತೆ ಪಕ್ಷ ನೀಡಿರುವ ಕರ ಪತ್ರಗಳಲ್ಲಿ ಮೋದಿ ಸರಕಾರ ಬಡವರ ಸಮರ್ಪಿತ ಸರಕಾರದ ಸಾಧನೆಗಳ ಬಗ್ಗೆ ತಿಳಿಸಲಾಗಿದ್ದು ಅದನ್ನು ನಮ್ಮ ಬೂತಿನ ಮನೆ ಮನೆಗೆ ತಲುಪಿಸಿ ಮೋದಿ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಸಂಪೂರ್ಣ ಬೂತ್ನ್ನು ಭಾರತಿಯ ಜನತಾ ಪಕ್ಷಕ್ಕೆ ಮತ ಹಾಕುವಂತೆ ತಿಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರು ಭಾರತಿ ಅಳವಂಡಿ ಹೇಳಿದರು.
ರೈತರ ಪರ ಸಾಕಷ್ಟು ಯೋಜನೆಗಳನ್ನು ರೂಪಿಸಿದ ಬಿಜೆಪಿ ಸರಕಾರ ಈ ಹಿಂದ ಬರಕಾಲ ಬಿದ್ದಾರ ಪ್ರತಿ ಹೇಕ್ಟರ್ಗೆ ೨೫ ಸಾವಿರ ದಿಂದ ೪೦ ಸಾವಿರ ರೂಪಾಯಿಗಳನ್ನು ಬರ ಪರಿಹಾರ ನೀಡಿ ಸಂಕಷ್ಟದಲ್ಲಿ ರೈತರ ಬೆನ್ನಿಗೆ ನಿಂತಿತ್ತು ಆದರೆ ಇಂದಿನ ಕಾಂಗ್ರೇಸ್ ಸಿದ್ಧರಾಮಯ್ಯ ಸರಕಾರ ಕೇವಲ ೨ ಸಾವಿರ ನೀಡಿರುವುದು ಖಂಡನೀಯ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ ಮಾತನಾಡಿದರು.
ಈ ಹಿಂದ ಮನಮೋಹನ ಸರಕಾರದಲ್ಲಿ ಭಾತರದ ಆರ್ಥಿಕವಾಗಿ ೧೨ ನೇ ಸ್ಥಾನದಲ್ಲಿತ್ತು ೨೦೧೪ ರಿಂದ ದೇಶದ ಆರ್ಥಿಕ ನೀತಿಯನ್ನು ದೇಶ ಅಭಿವೃದ್ಧಿ ಪೂರಕವಾಗಿ ರೂಪಸಿ ಇಂದು ಜಗತ್ತಿನಲ್ಲಿ ೫ನೇ ಆರ್ಥಿಕ ಸದೃಢ ದೇಶವನ್ನಾಗಿ ಮಾಡಿದ್ದ ಭಾರತೀಯ ಜನತಾ ಪಕ್ಷದ ನರೇಂದ್ರ ಮ ಓದಿ ಸರಕಾರ ಬರುವ ವರ್ಷಗಳಲ್ಲಿ ಭಾರತವನ್ನು ನಂ ೧ ದೇಶವನ್ನಾಗಿ ಮಾಡುವದಾಗಿ ಪಣತೋಟಿದೆ.
ಯಡಿಯೂರಪ್ಪ ಹಾಗೂ ಬಸವರಾಜ ಬೋಮ್ಮಾಯಿ ಸರಕಾರದ ಸಮಯದಲ್ಲಿ ರೈತರಿಗೆ ಕೇಂದ್ರ ಸರಕಾರದಿಂದ ೬ ಸಾವಿರ ರಾಜ್ಯ ಸರಕಾರದಿಂದ ೪ ಸಾವಿರ ಖಾತೆಗೆ ನೇರವಾಗಿ ಸಂದಾಯವಾಗುತ್ತಿತ್ತು ಅದನ್ನು ಇಂದಿನ ಕಾಂಗ್ರೇಸ್ ಸರಕಾರ ನಿಲ್ಲಿಸಿದ್ದ ರೈತರ ವಿರೋಧಿ ಸರಕಾರ ಕಾರಣ ಮೋದಿಯವರ ಕೈ ಬಲ ಪಡಿಸಲು ಬಸವರಾಜ ಬೋಮ್ಮಾಯಿಯವರೊಗೆ ೩ ಲಕ್ಷ್ ಮತಗಳಿಂದ ಗೆಲ್ಲಿಸಿ ಆರಿಸಿ ಕಳಿಸಬೇಕಾಗಿದೆ ಎಂದು ಬೋಮ್ಮಾಯಿ ಅವರ ಪುತ್ರ ಭರತ್ ಬೋಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಅನೀಲ ಮೆಣಸಿನಕಾಯಿ, ಬಸವರಾಜ ಇಟಗಿ, ಜಿಲ್ಲಾ ವಕ್ತಾರರು ಎಂ.ಎಂ. ಹಿರೇಮಠ ರಾಜು ಕುಲಕರ್ಣಿ ನಿಕಟ ಪೂರ್ವ ಅಧ್ಯಕ್ಷರು, ಎಂ.ಎಸ್. ಸ್ವಾತಿ ಅಕ್ಕಿ, ಉಷಾ ದಾಸರ, ಪದ್ಮಾ ಮುತ್ತಲದಿನ್ನಿ, ರವಿ ವಗ್ಗನವರ, ರಮೇಶ ಸಜ್ಜಗಾರ, ಅಮರನಾಥ ಬೆಟಗೇರಿ, ಅಶ್ವೀನಿ ಅಂಕಲಕೋಟಿ, ಪವಿತ್ರಾ ಕಲ್ಕುಟರ, ಜ್ಯೋತಿ ಪಾಯಪ್ಪಗೌಡ್ರ, ಪಾರ್ವತಿ ಪಟ್ಟಣಶೆಟ್ಟಿ, ಕಮಲಾಕ್ಷಿ ಗೊಂದಿ, ರತ್ನಾ ಕುರಗೊಡ, ಸುಧೀರ ಕಾಟಿಗಾರ, ವಿನಾಯಕ ಹಬೀಬ, ನಾಗರಾಜ ತಳವಾರ, ವಿನೋದ ಹೌಸನೂರು ಸೇರಿದಂತೆ ಮುಂತಾದವರು ಇದ್ದರು.