ಸಿರುಗುಪ್ಪ.ಏ.22: ಸಮಾಜದಲ್ಲಿ ಎಲೆಮರೆ ಕಾಯಿಯಂತಿರುವ ಅನೇಕ ಉದಯೋನ್ಮುಖ ಬರಹಗಾರರ ಭಾವನೆ ಮತ್ತು ಬರಹಗಳಿಗೆ ಮಂಜುನಾಥ್ ರ ಕವನ ಸಂಕಲನ ಮುಖ್ಯ ವೇದಿಕೆಯಾಗಿದೆ ಎಂದು ಹಂಪಿ ವಿವಿಯ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್ ಬೇವಿನಕಟ್ಟಿ ಅಭಿಪ್ರಾಯ ಪಟ್ಟರು.
ತಾಲೂಕಿನ ಕೊತ್ತಲಚಿಂತ ಗ್ರಾಮದ ಶ್ರೀ ಹನುಮಂತಾವಧೂತರ ಮಠದಲ್ಲಿ ಹಮ್ಮಿಕೊಂಡ ಡಾ.ಹನುಮಂತ.ಡಿ ಮತ್ತು ಡಾ.ರೋಹಿಣಿ
(ಡಾ.ಸಕ್ಕುಬಾಯಿ)ಯವರ ವಿವಾಹ ಕವಿ, ಸಂಶೋಧಕ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆಯವರ ಸಂಪಾದಿತ ಕವನ ಸಂಕಲನ
ಬಿಡುಗಡೆ ಮಾಡಿ ಮಾತನಾಡುತ್ತಾ ಎಲ್ಲರಲ್ಲಿರುವ ಕವಿ ಮನಸ್ಸಿಗೆ ಸೂಕ್ತ ವೇದಿಕೆ ದೊರಕಿದಾಗ ಅವನಿಗೂ, ಅವನ ಭಾವನೆಗಳಿಗೆ ಮನ್ನಣೆ ದೊರಕಿದಂತಾಗುತ್ತದೆ. ಆ ನಿಟ್ಟಿನಲ್ಲಿ ಕೈಗೋಲು ನಿಜಕ್ಕೂ ಸಾರ್ಥಕತೆಯ ಹಾದಿ ತಲುಪಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತಿ ಇದ್ದ ಸಾಹಿತಿ ಡಾ.ದಿವಾಕರ ನಾರಾಯಣ ಮಾತಾನಾಡಿ ಆಡಂಬರದ ಆಟದಂತಾಗಿರುವ ಮದುವೆಯ ವೇದಿಕೆಯಲ್ಲಿ ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳು ಇಂದಿನ ಜಮಾನಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಪ್ರಹ್ಲಾದ್.ಡಿ.ಎಂ, ಡಾ.ಕೆಂಗಯ್ಯ, ಪ್ರಾಧ್ಯಾಪಕರಾದ ಡಾ.ಶಶಿಕಾಂತ್ ಬಿಲ್ಲವ್, ಬಸವರಾಜ ನಾಡಂಗ, ರಾಮಣ್ಣ, ಪಿ.ಕೆ.ರವಿ, ಆರ್.ಚನ್ನನಗೌಡ ಮತ್ತಿತರರು ಉಪಸ್ಥಿತರಿದ್ದರು.