ಬಳ್ಳಾರಿ, ಏ.18 : ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಅಂತಾ ಹೇಳಿಯೇ ಇಲ್ಲ. ಯಾರೇ ಆಗಲಿ ಹಾಗೆ ಭಾರತದಲ್ಲಿದ್ದು ಹೇಳಿದರೆ ಅಂತಹವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ನಾಸೀರ್ ಹುಸೇನ್ ಅವರಿಗೆ ನಗರದಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ ಪ್ರತಿಭಟಿಸಿದಕ್ಕೆ ಪ್ರತಿಕ್ರಿಯೆ ನೀಡಿದ ಅವರು. ನೂರಕ್ಕೆ ನೂರು ಪರ್ಸೆಂಟ್ ಪಾಕಿಸ್ತಾನ ಜಿಂದಾಬಾದ್ ಅಂದಿಲ್ಲ, ಅದನ್ನ ಕೆಲವರು ಎಡಿಟ್ ಮಾಡಿ, ಮ್ಯಾನಿಪ್ಲೇಟ್ ಮಾಡಿದ್ದಾರೆ.
ಈ ಕುರಿತ ಪ್ರಕರಣದಲ್ಲಿ ಎಫ್ ಎಸ್ ಎಲ್ ವರದಿ ಇನ್ನೂ ಬಂದೇ ಇಲ್ಲ ಎಂದು ಮಾಧ್ಯಮದವರ ಜೊತೆ ವಾದ ಸಚಿವರು ವಾದ ಮಾಡಿದರು.ವರದಿ ಬಂದಿಲ್ಲವಾದರೇ ಆರೋಪಿಗಳನ್ನ ಬಂಧಿಸಿದ್ದು ಯಾಕೆ ಎನ್ನುವ ಪ್ರಶ್ನೆಗೆ. ಸಾಮಾನ್ಯವಾಗಿ ಇಂತಹ ಪ್ರಕರಣವಾದಾಗ ಬಂಧನ ಮಾಡುವುದು ಒಂದು ಅಭ್ಯಾಸ. ಕೆಲವೊಮ್ಮೆ ಮುಗ್ದರನ್ನ ತೆಗೆದು ಕೊಂಡು ಹೋಗಿ ಒಳಗೆ ಹಾಕಿ. ಆಮೇಲೆ ಬೆಲ್ ಮೇಲೆ ಬಿಟ್ಟುಕೊಟ್ಟಿದ್ದಾರೆ ತನಿಖೆ ನ್ಯಾಯಾಲಯದಲ್ಲಿದೆ. ಕರ್ನಾಟಕದಲ್ಲಿ ಯಾರು ಹಾಗೆ ಮಾಡಲ್ಲ, ಮಾಡಿದ್ರೆ ಅವನನ್ನ ಗಲ್ಲಿಗೇರಿಸಿದ್ರು ತಪ್ಪಿಲ್ಲ ಎಂದರು.
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಭಾಷಣ ಮಾಡುವಾಗ ಮಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯಿಸಿ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ನಮ್ಮ ಅಧಿನಾಯಕರು ಯಾವ ಕಾರಣಕ್ಕೆ ಹಾಗೇ ಎಂದಿದ್ದಾರೋ ಗೊತ್ತಿಲ್ಲ. ಡಿ. ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಅಂತಾ ಬಹಳ ಜನಕ್ಕೆ ಬಯಕೆ ಇದೆ, ಅದರಲ್ಲಿ ಏನು ತಪ್ಪಿಲ್ಲ. ಮಂತ್ರಿಯಾದವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನು ಆಸೆ ಇರೋದು ಸಾಮಾನ್ಯ.ರಾಹುಲ್ ಗಾಂಧಿ ಅವರು ಬಾಯಿ ತಪ್ಪಿನಿಂದ ಹೇಳಿರಬಹುದು. ಶಿವಕುಮಾರ್ ಅವರೂ ಕೂಡ ಸಮರ್ಥ ನಾಯಕರಿದ್ದಾರೆ.
ಅವರಿಗೂ ಸಿಎಂ ಆಗೂವ ಎಲ್ಲಾ ಅರ್ಹತೆ ಇದೆ.ಸದ್ಯಕ್ಕೆ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗಿಲ್ಲ ಎಂದರು.
ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ವಿಜಯನಗರ ಜಿಲ್ಲೆಯಲ್ಲಿ ವೀಕ್ ಇದೆಂಬ ಮಾತುಗಳು ಸರಿಯಲ್ಲ ಕ್ಷೇತ್ರದ ಎಲ್ಲಡೆ ಕಾಂಗ್ರೆಸ್ ಗೆ ಉತ್ತಮ ಬೆಂಬಲ ಇದೆ. ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದರು.