ರಾಯಬಾಗ,ಏಪ್ರಿಲ್ 17: ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಶಕ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮತ್ತೆ ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ಕೈ ಬಲಪಡಿಸಬೇಕಿದೆ. ಕಾಂಗ್ರೆಸ್ ಗ್ಯಾರಂಟಿಗಳೇ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಮತಯಾಚಿಸಿ, ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಬೆಳಗಾವಿ, ಚಿಕ್ಕೋಡಿ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ.
ರೈತರ ಕೃಷಿ ಕಾರ್ಯಗಳಿಗೆ ನೀರಾವರಿ ಯೋಜನೆ ಸೇರಿದಂತೆ ಅನೇಕ ಮಹತ್ವದ ಕಾರ್ಯಗಳನ್ನು ನೆರವೇರಿಸಲಾಗಿದೆ. ಈ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಹೀಗಾಗಿ ಯುವ ನಾಯಕಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬಹುಮತ ಅಂತರ ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಡಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಅನಿರ್ವಾಯವಾಗಿದೆ: ದೇಶದ ಅಭಿವೃದ್ದಿ, ಜನರು ನೆಮ್ಮದಿಯಿಂದ ಜೀವನ ನಡೆಸಲು ಕಾಂಗ್ರೆಸ್ ಪಕ್ಷ ದೇಶಕ್ಕೆ ಅನಿರ್ವಾಯವಾಗಿದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದಾರೆ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾ-ಜಿದ್ದಿನ ಕಣದಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡು ಅಧಿಕಾರಕ್ಕೇರಿದೆ. ಲೋಕಸಭಾ ಅಖಾಡದಲ್ಲಿ ಬಿರುಸಿನ ಪೈಟ್ ನಡೆದಿದೆ. ಮತದಾರರು ದೃಢ ನಿರ್ಧಾರ ಮಾಡಿ “ಕೈ ” ಗೆ ಶಕ್ತಿ ನೀಡಬೇಕು. ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿಕೊಂಡು.
ಚಿಕ್ಕೋಡಿ ಸೇರಿದಂತೆ ಮಹಾಲಿಂಗಪೂರವರೆಗೂ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕಾರ್ಯಗಳ ಸರಾಗವಾಗಿ ನಡೆಯುತ್ತವೆ. ನಮ್ಮಗೆ ರೈತರ ಹಿತರಕ್ಷಣೆ ಮುಖ್ಯವಾಗಿದೆ ಹೀಗಾಗಿ ಈಗಾಗಾಲೇ ನೀರನ್ನು ಬಿಡಲಾಗಿದೆ. ಜನ-ಜಾನುವಾರುಗಳು ನೀರಿನ ಅವಶ್ಯ ಬಹಳಷ್ಟಿದೆ.
ಮತ್ತೆ ಮತ್ತೆ ನೀರನ್ನು ಹರಿಸುವ ಪ್ರಯತ್ನ ಮಾಡಲಾಗುವುದು. ಈ ಭಾಗದ ರೈತರು ಬಹಳಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಹೀಗಾಗಿ ಕೈ ಗೆ ಶಕ್ತಿ ತುಂಬಿ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿದಾಗ ಮಾತ್ರ ಇವೆಲ್ಲವೂ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ಈ ವೇಳೆ 60 ಕ್ಕೂ ಹೆಚ್ಚು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಚಿವ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎಸ್ ಬಿ ಘಾಟಗೆ, ಮಹಾವೀರ ಮೋಹಿತೆ, ಅರ್ಜುನ ನಾಯಕವಾಡಿ, ಅಪ್ಪಾಸಾಹೇಬ ಕುಲಕರ್ಣಿ. ದಿಲೀಪ ಜಮಾದಾರ, ಸದ್ದು ಬಂಡಗರ, ಸತಾರ ಮುಲ್ಲಾ, ಶಿವು ಮರ್ಯಾಯಿ, ರಾಜು ಶಿರಗಾಂವಿ, ಮಹೇಶ ಕೊರವಿ, ಮಹಾದೇವ ನಾಯಕ, ಅರ್ಜುನ ಬಳ್ಳಾರಿ, ರಾಮಪ್ಪ ಬೆಳಗಲಿ, ಶಂಕರ ನಾಯವಾಡಿ, ರಾಮರಾಜ ಬಳ್ಳಾರಿ, ವಿಠ್ಠಲ ಅಂಕಲಗಿ, ಮಹಾದೇವ ತಿಮ್ಮವ್ವಗೋಳ, ಅಶೋಕ ಮರ್ದಿ, ಶಂಕರ ಬಳ್ಳಾರಿ, ಮೋಹನ ಸಂಕಾಡಿ, ಆನಂದ ಬಳ್ಳಾರಿ, ಮೋಹನ ಪಕಾಂಡಿ, ಲಕ್ಷ್ಮಣ ತಿಗಡಿ, ಲಕ್ಷ್ಮಣ ಬೆಳಗಲಿ, ಸಿದ್ದಪ್ಪ ಬಳ್ಳಾರಿ, ನಾಮದೇವ ಅವರಾದಿ, ಮಹಾವೀರ ಪಾಟೀಲ, ವಿಠ್ಠಲ ನಾಯಕವಾಡಿ, ಶಂಕರ ನಾಯಕವಾಡಿ, ಮಾರುತಿ ಬಳ್ಳಾರಿ, ರಾಘವೇಂದ್ರ ಮರ್ದಿ, ಸಿದ್ದಣ್ಣ ದುರದುಂಡಿ, ಅರ್ಜುನ ತೋಳಿ, ಕರೆಪ್ಪ ಮೇತ್ರಿ, ಪಾರುಕ ನದಾಪ, ಪ್ರಕಾಶ ಸೊಳ್ಳೆನವರ, ಮುತ್ತು ಅರಬಾಂವಿ, ಸುರೇಶ ಗದಾಡಿ ಹಾಗೂ ಇತರರು ಇದ್ದರು.