ಗದಗ 17: ಭಾರತ ದೇಶದ ಭವ್ಯ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ, ಸಮಾನತೆ, ಸಹೋದರತೆ ಮತ್ತು ಬ್ರಾತೃತ್ವವನ್ನು ನೀಡಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಪ್ರಜೆಯೂ ಈ ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಬಾಳಿ ಬದುಕಿದಾಗ ನಮಗೆ ಮತ್ತು ನಮ್ಮ ದೇಶದ ಸಂವಿಧಾನಕ್ಕೊಂದು ಅರ್ಥ ಬರುತ್ತದೆ.
ಅದರಂತೆ ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಕಾರಣ ಈ ಭಾರತ ದೇಶದ ಸಂವಿಧಾನ. ಈ ಸಂವಿಧಾನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿರುವ ಹಕ್ಕುಗಳನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಗದಗ ಜಿಲ್ಲಾ ಅಕ್ಷರ ದಾಸೋಹ (ಬಿಸಿ ಊಟ) ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವಿಜಯಲಕ್ಷ್ಮೀ ಚಲವಾದಿಯವರು ಗದಗ ತಾಲೂಕ ನಾಗಾವಿ ಗ್ರಾಮದ ಡಾ. ಅಂಬೇಡ್ಕರ ನಗರದಲ್ಲಿ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘ ಏರ್ಪಡಿಸಿದ್ದ ಡಾ. ಅಂಬೇಡ್ಕರ ಅವರ ೧೩೩ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಗಂಗವ್ವ ಚಲವಾದಿ, ಸುಮಾ ಚಲವಾದಿ, ಚಂದ್ರವ್ವ ಚಲವಾದಿ, ಕವಿತಾ ಚಲವಾದಿ, ಮಂಜುಳಾ ಚಲವಾದಿ, ಭಾರತಿ
ಚಲವಾದಿ, ಅನ್ನಪೂರ್ಣ ಚಲವಾದಿ, ಸಂಗೀತಾ ಬನಹಟ್ಟಿ, ರತ್ನವ್ವ ಬನಹಟ್ಟಿ, ಕಮಲವ್ವ ಚಲವಾದಿ, ರೇಣುಕಾ ಚಲವಾದಿ, ಕಸ್ತೂರೆವ್ವ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂತೋಷ ಚಲವಾದಿ ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ನವೀನ ನರೇಗಲ್ಲ ವಂದಿಸಿದರು.