ಯಶಸ್ವಿ ಮೂರನೇ ಪ್ರದರ್ಶನದ ಪರಿಮಳದವರು ನಾಟಕ

Ravi Talawar
ಯಶಸ್ವಿ ಮೂರನೇ ಪ್ರದರ್ಶನದ ಪರಿಮಳದವರು ನಾಟಕ
WhatsApp Group Join Now
Telegram Group Join Now

ಬೆಳಗಾವಿ,.16: ನಗರದ ರಂಗಸಂಪದ ತಂಡದವರು ಇದೇ ದಿ. ೧೪ ರವಿರಾರದಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಜಿ.ಬಿ. ಜೋಶಿಯವರು ರಚಿಸಿದ ಪರಿಮಳದವರು ನಾಟಕ ತುಂಬಿದ ಸಭಾಗೃಹದಲ್ಲಿ ಮೂರನೇ ಪ್ರಯೋಗವಾಗಿ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಕಾರಂಜಿ ಮಠದ ಶ್ರೀಗಳು ಮಾತನಾಡುತ್ತ ೩೭೦ ವರ್ಷಗಳ ಹಿಂದೆ ಶ್ರೀ ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದರೂ ಈಗ ಮತ್ತು ಇನ್ನು ಮುಂದೆಯೂ ಕಾಮಧೆನು ಕಲ್ಪವೃಕ್ಷವಾಗಿ ಎಲ್ಲರ ಮನದಾಸೆಗಳನ್ನು ಈಡೇರುಸತ್ತ ಬಂದಿದ್ದಾರೆ. ಇಂದಿನ ಈ ಕಲಿಯುಗದಲ್ಲಿ ಇಂತಹ ಭಕ್ತಿ ಪ್ರಧಾನ ನಾಟಕಗಳು ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕು. ಎಲ್ಲರೂ ಇಂತಹ ಮಹಾಮಹಿಮರ ಜೀವನ ಚರಿತ್ರೆಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಹಿರಿಯ ವಾಗ್ಮಿಗಳಾದ ಡಾ. ಬಸವರಾಜ ಜಗಜಂಪಿಯವರು ಮಾತನಾಡುತ್ತ ಇಂದು ಶ್ರೀ ರಾಘವೇಂದ್ರ ಸ್ವಾಮಿಯವರನ್ನು ಪ್ರತ್ಯಕ್ಷವಾಗಿ ನೋಡಿದ ಅನುಭವವಾಯಿತು. ಸ್ವಾಮೀಜಿಯವರು ವೃಂದಾವನಸ್ಥರಾಗುವ ಸಮಯದಲ್ಲಿಯಂತೂ ಕಣ್ಣುತುಂಬಿ ಬಂದಿತು. ನೈಜ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ ಅದರಲ್ಲಿಯೂ ವಿಶೇಷವಾಗಿ ಡಾ. ಅರವಿಂದ  ಕುಲಕರ್ಣಿಯವರು ಎಲ್ಲ ಭಕ್ತರ ಹೃದಯದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರಂಜಿ ಮಠದ ಗುರುಸಿದ್ಧ ಸ್ವಾಮಿಜಿ, ಪ್ರಯೋಜಕತ್ವವನ್ನು ವಹಿಸಿದ್ದ ಖ್ಯಾತ ನ್ಯಾಯವಾದಿಗಳಾದ ಎಸ್. ಎಂ. ಕುಲಕರ್ಣಿ ಮತ್ತು ಜಯಂತ ಜೋಶಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಪರಿಮಳದವರು ನಾಟಕ ರಂಗಕ್ಕೆ ತರುವುದು ಒಂದು ಸವಾಲಾಗಿದ್ದು ಶ್ರೀಪತಿ ಮಂಜನಬೈಲು ಅವರ ನಿರ್ದೇಶನದಲ್ಲಿ ಮತ್ತು ರಾಘವೇಂದ್ರ ಸ್ವಾಮಿಯವರ ಪಾತ್ರದಲ್ಲಿ ಡಾ. ಅರವಿಂದ ಕುಲಕರ್ಣಿಯವರ ನೈಜ ಅಭಿನಯದಿಂದ ಆ ಸವಾಲನ್ನು ಎದುರಿಸಿ ಯಶಸ್ವಿಯಾಗಿದ್ದಾರೆ.

-೦-೦-೦-

WhatsApp Group Join Now
Telegram Group Join Now
Share This Article