ಸತ್ತೂರು : 16 ನಿಷ್ಕಾಮ ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ನಾವು ಯಾವ ರೀತಿಯಲ್ಲಿ ಭಕ್ತಿ ಮಾಡಬೇಕು, ಯಾವುದು ನಿಜವಾದ ಭಕ್ತಿ, ಭಕ್ತನಲ್ಲಿ ಇರಬೇಕಾದ ಗುಣಗಳು ಯಾವವು, ಯಾರ ಉಪಾಸನೆಯಿಂದ ಭಗವಂತನನ್ನು ಹೊಂದುತ್ತಾರೆ, ಮೋಕ್ಷ ಪಡೆಯುತ್ತಾರೆ ಎಂಬ ಮುಂತಾದ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತದೆ ಈ ಪ್ರಶ್ನೆಗಳಿಗೆ ಶ್ರೀ ಕೃಷ್ಣ ಪರಮಾತ್ಮನನ ಉಪಾಸನೆಯಿಂದ ಮಾತ್ರ ಮೋಕ್ಷ ಹೊಂದುತ್ತಾರೆ ಎಂದು ಪಂ. ಕಪಿಲಾಚಾರ್ಯ ಗಲಗಲಿ ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ಡಾ. ಶ್ರೀನಾಥ್ ಇವರ ನಿವಾಸದಲ್ಲಿ 12ನೇ ಅಧ್ಯಾಯವಾದ ಭಕ್ತಿ ಯೋಗ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತಾ ಅವ್ಯಕ್ತ ತತ್ವ, ಮಾತೆ ಲಕ್ಷ್ಮಿಯ ಉಪಾಸನೆ ಹಾಗೂ ಭಗವಂತನ ಉಪಾಸನೆಯಲ್ಲಿ ವ್ಯತಿರಿಕ್ತ. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಲಕ್ಷ್ಮಿ, ಕ್ಷಮಿಸಲಾರಳು ಆದರೆ ಭಗವಂತ ಕ್ಷಮಿಸುತ್ತಾನೆ. ಉಪಾಸನೆ ಮಾಡಲು ಕಠೋರವಾದ ಇಂದ್ರಿಯ ನಿಗ್ರಹ ಎಲ್ಲವನ್ನು ಸಮೃದ್ಧಿಯಿಂದ ಕಾಣುತ್ತಾ ಯಾವುದೇ ನ್ಯೂನತೆ ಇಲ್ಲದೆ ಉಪಾಸನೆ ಅಗತ್ಯ, ನಾರಾಯಣನ ಉಪಾಸನೆ ಮಾಡುವವರು ಲಕ್ಷ್ಮಿಯನ್ನು ಇತರೆ ದೇವತೆಗಳನ್ನು ಪ್ರತ್ಯೇಕವಾಗಿ ಉಪಾಸನೆ ಮಾಡುವ ಅಗತ್ಯವಿಲ್ಲ, ಲಕ್ಷ್ಮಿಗೆ ಸರ್ವದೇವತೆಗಳಿಗೆ ಅತ್ಯಂತ ಪ್ರೀತಿಪೂರ್ವಕವಾದದ್ದು ಭಗವಂತನ ಸಾಧಕನಿಗೆ ಸಕಲ ದೇವತೆಗಳ ಸಹಾಯ ಮಾಡಿ, ಆತ ತನ್ನ ಸಾಧನ ಮಾರ್ಗದಲ್ಲಿ ಎತ್ತರಕ್ಕೆ ಇರುವಂತೆ ಏಕಭಕ್ತಿಯನ್ನು ಸಾಧಿಸಬಹುದು ಭಕ್ತಿ ಮಾರ್ಗದಲ್ಲಿ ಗಟ್ಟಿಗೊಳ್ಳಬಹುದು ಎಂದು ಲೌಕಿಕ ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ, ಬಳಗದ ಸದಸ್ಯರಿಂದ ಹರಿ ವಾಯು ಗುರುಗಳ ಪಾರಾಯಣದಿಗಳು ನಡೆದವು ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ ಜೋಶಿ, ಹನುಮಂತ ಪುರಾಣಿಕ, ಸಿ ಕೆ.ಕುಲಕರ್ಣ, ಪ್ರೊ ವಾಮನ ಭಾದ್ರಿ, ಸಂಜೀವ ಜೋಶಿ, ಕೇಶವ ಕುಲಕರ್ಣಿ, ವಿಲಾಸ ಸಬನಿಸ, ಆನಂದ ಬಾಗಲ, ರಮೇಶ್ ಅಣ್ಣಿಗೇರಿ, ಸಂಜೀವ ಜೋಶಿ , ಉದಯ ದೇಶಪಾಂಡೆ , ಅಶೋಕ್ ಬಹದ್ದೂರ್ ದೇಸಾಯಿ , ಅನಿಲ್ ದೇಶಪಾಂಡೆ , ಪ್ರಕಾಶ್ ದೇಸಾಯಿ, ಗಿರೀಶ್ ಪಾಟೀಲ, ಆನಂದ್ ದೇಶಪಾಂಡೆ ಮುಂತಾದ ಸದಸ್ಯರು ಉಪಸ್ಥಿತರಿದ್ದರು.