ಯರಗಟ್ಟಿ :೧೫ ಸ್ಥಳಿಯ ಅಂಬೇಡ್ಕರ ಭವನದಲ್ಲಿ ರವಿವಾರ ದಿ.೧೪ ರಂದು ಸಾಯಂಕಾಲ ದಲೀತ ಸಂಘರ್ಷ ಸಮೀತಿ ಹಾಗೂ ಜೈ ಭಿಮವಾದ ಸಂಘಟನೆಯವರಿಂದ ಡಾ|| ಬಿ.ಆರ್.ಅಂಬೇಡ್ಕರ ೧೩೩ ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅವರ ಹುಟ್ಟು ಬಾಲ್ಯವಸ್ಥೆ, ಶಿಕ್ಷಣ ಪಡೆಯುವಾಗ ಅನುಭವಿಸಿದ ಕಷ್ಟಗಳು ಮತ್ತು ಕೆಳವರ್ಗದ ಜನರ ಅಬ್ಯೂದಯಕ್ಕಾಗಿ ಸಂವಿಧಾನದಲ್ಲಿ ಉಲ್ಲೇಖ ಅದರಿಂದ ಈಗ ಎಲ್ಲರೂ ಎಲ್ಲ ಹಕ್ಕುಗಳೊಂದಿಗೆ ನೆಮ್ಮದಿಯಿಂದ ಬಾಳುವ ಎಲ್ಲ ವಿಷಯವನ್ನು ಕೂಲಂಕುಷವಾಗಿ ಮಾಜಿ ಸೈನಿಕ ಪುಂಡಲೀಕ ತಳವಾರ, ನಿವೃತ್ತ ಅಧಿಕಾರಿ ಭಾಸ್ಕರ ಹಿರೇಮೇತ್ರಿ, ಪತ್ರಕರ್ತ ಶಿವಾನಂದ ಬಳಿಗಾರ ಮತ್ತು ಎ.ಎಸ್.ಐ. ರಂಗನ್ನವರ ಮಾತನಾಡಿದರು. ಈ ವೇಳೆ ಜೈ ಭಿಮವಾದ ಅದ್ಯಕ್ಷ ಸುರೇಶ ಭಜಂತ್ರಿ, ಡಿ.ಎಸ್.ಎಸ್. ಅದ್ಯಕ್ಷರಾದ ಬಾಬು ಚೆನ್ನಮೇತ್ರಿ, ಸಂತೋಷ ಚೆನ್ನಮೆತ್ರಿ, ಸುರೇಶ ಗಿರೆವ್ವಗೋಳ, ಪ್ರಕಾಶ ಚೆನ್ನಮೇತ್ರಿ, ಪೋಲಿಸ ಪೆದೆ ದೊಡವಾಡ, ಸಂಘಟನೆಯ ಸದಸ್ಯರು ಹಾಗೂ ಮಹಿಳೆಯರು ಇದ್ದರು.