ಶಿಸ್ತು, ಸೇವಾ ಮನೋಭಾವ ಮೂಡಿಸುವದು ಸ್ಕೌಟ್ಸ್‌ನ ಮುಖ್ಯ ಉದ್ದೇಶ – ಮಹಾವೀರ

Pratibha Boi
ಶಿಸ್ತು, ಸೇವಾ ಮನೋಭಾವ ಮೂಡಿಸುವದು ಸ್ಕೌಟ್ಸ್‌ನ ಮುಖ್ಯ ಉದ್ದೇಶ – ಮಹಾವೀರ
WhatsApp Group Join Now
Telegram Group Join Now

, ಜಮಖಂಡಿ ;ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಳುವಳಿಯ ಮುಖ್ಯ ಉದ್ದೇಶವಾಗಿದೆ ಎಂದು ತಾಲುಕು ಸಂಘಟಕ ಮಹವೀರ ಜಮಖಂಡಿ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮುವಾರ ಮುರು ದಿನಗಳ ರೇಂಜರ್ಸ್‌ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂತಹ ಶಿಬಿರಗಳು ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಿವೆ. ಸಮಯಪಾಲನೆ, ನಿಯಮ ಪಾಲನೆ ಮತ್ತು ಕಷ್ಟ ಸಹನೆಯನ್ನು ಕಲಿಯುತ್ತಾರೆ. ತಂಡದಲ್ಲಿ ಕೆಲಸ ಮಾಡುವ ಮನೋಭಾವ, ಪರಸ್ಪರ ಸಹಕಾರ, ಸಹಿಷ್ಣುತೆ ಮತ್ತು ಸಹಾನುಭೂತಿ ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಶಿಬಿರಗಳು ನೆರವಾಗುತ್ತವೆ. ಸ್ವಾವಲಂಬನೆ, ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ.ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ. ಎಸ್‌. ಶಿರೂರ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‌ ಚಳುವಳಿಯನ್ನು ಬ್ರಿಟಿಷ್ ಸೇನಾಧಿಕಾರಿ ಲಾರ್ಡ್ ಬ್ಯಾಡನ ಪಾವೆಲ್‌ ಆರಂಭಿಸಿದರು. 1907ರಲ್ಲಿ ಇಂಗ್ಲೆಂಡ್‌ನ ಬ್ರೌನ್‌ಸಿ ದ್ವೀಪದಲ್ಲಿ ಮೊದಲ ಶಿಬಿರವನ್ನುಆಯೋಜಿಸಿದ ಅವರು, 1908ರಲ್ಲಿ ‘ಸ್ಕೌಟಿಂಗ್ ಫಾರ್‌ ಬಾಯ್ಸ್‌ಎಂಬ ಪ್ರಸಿದ್ಧ ಪುಸ್ತಕವನ್ನು ಪ್ರಕಟಿಸಿದರು. 1921ರಲ್ಲಿ ಭಾರತಕ್ಕೆ ಭೇಟಿ ನೀಡಿದ ನಂತರ ಈ ಚಳುವಳಿಇಲ್ಲಿ ಬಲವಾಗಿ ಬೆಳೆದು, 1950ರಲ್ಲಿ ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ ಘಟನೆ ಅಧಿಕೃತವಾಗಿ ಪ್ರಾರಂಭವಾಯಿತು. ಎಂದುತಿಳಿಸಿದರು.

ಸುಮಾ ವೈ. ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಪಾಟೀಲ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಡಾ. ವಿ. ಆರ್‌. ದಳವಾಯಿ, ಡಾ. ಎಂ. ಎಂ. ಮಂಟೂರ, ಎಸ್‌. ಕೆ. ಡೇಂಬರೆ, ಡಾ. ವೈ. ವೈ. ಕೊಕ್ಕನವರ, ಡಾ. ಎಸ್‌. ಎನ್‌. ಬಜಂತ್ರಿ, ಅಮ್ಮಣ್ಣ ಕುರುಂದವಾಡ 

WhatsApp Group Join Now
Telegram Group Join Now
Share This Article