ನಿಯಮ ಬಾಹೀರವಾಗಿ ಹಕ್ಕು ಬದಲಾವಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಊಳೂರ್ ಸಿದ್ದೇಶ್ 

MK HasiruKranti
ನಿಯಮ ಬಾಹೀರವಾಗಿ ಹಕ್ಕು ಬದಲಾವಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಊಳೂರ್ ಸಿದ್ದೇಶ್ 
WhatsApp Group Join Now
Telegram Group Join Now
 ಬಳ್ಳಾರಿ.ಏ. 13:  ತಾಲ್ಲೂಕಿನ, ಹದ್ದಿನಗುಂಡು ಗ್ರಾಮದ ಸರ್ವೆ ನಂ.154*1, ವಿಸ್ತೀರ್ಣ 4.56 ಎಕರೆ ಭೂಮಿ ಬಳ್ಳಾರಿ ಸ್ಟಿçÃಲ್ಸ್ & ಅಲೋಯ್ಸ್ ಲಿಮಿಟೆಡ್ ಎಂದು ಇದ್ದು, ದಸ್ತಾವೇಜಿನ ಸಂಖ್ಯೆ: ಃಐಙ-1-3495-2025-26 ದಿನಾಂಕ:27.ಮೇ 2026ರAತೆ ರಿಯಾಜ್ ಅಬ್ದುಲ್‌ಶೇಖ್ ತಂದೆ ಲೇಟ್ ಅಬ್ದುಲ್ ಶೇಖ್  ಇವರಿಗೆ ಕ್ರಯ ಆಗಿರುತ್ತದೆ.
ಮುಂದುವರೆದು ತಾಲ್ಲೂಕು ಕಛೇರಿಯಿಂದ 30.ಮೇ .2025ರಂದು 21 ಫಾರಂ ಸಹ  ಬಂದಿರುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳ ವರದಿ ಪ್ರಕಾರ ಸದರಿ ಜಮೀನುನಲ್ಲಿ ಜಿ.ಡಿ.ಎಂದು ಇದ್ದು, ಸದರಿ ಜಮೀನು ಯಾವುದೇ ಕೃಷಿ ಚಟುವಟಿಕೆ ನೆಡೆದಿರುವುದಿಲ್ಲ ಹಾಗೂ ಸುಮಾರು ವರ್ಷಗಳು ಬೀಳು ಇದೆ ಎಂದು ವರದಿ ನೀಡಿರುತ್ತಾರೆ. ಕಂದಾಯ ನಿರೀಕ್ಷಕರ ವರದಿ ಪ್ರಕಾರ ಸದರಿ ಜಮೀನು ಬಳ್ಳಾರಿ ಸ್ಟಿçÃಲ್ಸ್ & ಅಲೋಯ್ಸ್ ಲಿಮಿಟೆಡ್ ಕಂಪನಿ (ಕಾರ್ಖಾನೆ) ಹೆಸರಿನಲ್ಲಿ ಪಹಣಿ ನಮೂದಿದ್ದು, ಇದಕ್ಕೆ ಸಂಬAಧಪಟ್ಟAತೆ ಇಲಾಖೆಯಿಂದಾಗಲಿ ಅಥವಾ ಸರ್ಕಾರದಿಂದಾಗಲಿ ಮಾರಾಟ ಪರವಾನಿಗೆಯನ್ನು ಪಡೆದು ಸಲ್ಲಿಸಿರುವುದಿಲ್ಲ ಎಂದು ಮಾನ್ಯ ತಹಶೀಲ್ದಾರವರಿಗೆ ಮುಂದಿನ ಕ್ರಮಕ್ಕೆ ಸಲ್ಲಿಸಿರುತ್ತಾರೆ.
  ಮಾನ್ಯ ತಹಶೀಲ್ದಾರರು, ಆದೇಶ ಪೀಠಿಕೆಯಲ್ಲಿ ವಿವರಿಸಿದ ಸಂದರ್ಭ, ವಾಸ್ತವಾಂಶ ಮತ್ತು ಕಾರಣಗಳ ಆಧಾರದ ಮೇಲೆ ಬಳ್ಳಾರಿ ತಾಲ್ಲೂಕು, ಹದ್ದಿನಗುಂಡು ಗ್ರಾಮದ ಸ.ನಂ. 154*1, ವಿಸ್ತೀರ್ಣ: 4.56 ಎಕರೆ ಜಮೀನಿಗೆ ಸಂಬAಧಿಸಿದAತೆ, ವಹಿವಾಟು ಸಂಖ್ಯೆ: 153/2024-25, ಹಕ್ಕು ಬದಲಾವಣೆ ಸಂಖ್ಯೆ: 42/2024-2025ರನ್ನು ರದ್ದು ಪಡಿಸಿ ಯಥಾಸ್ಥಿತಿ ಕಾಪಾಡಲು ಆದೇಶಿಸಿರುತ್ತದೆ.
ಆದ್ದುದರಿಂದ ಮಾನ್ಯ ತಹಶೀಲ್ದಾರರ ಯಥಸ್ಥಿತಿ ಕಾಪಾಡಲು ಆದೇಶಿಸಿದ್ದರು ಸಹ ಆದೇಶವನ್ನು ಮೀರಿ ಅಧಿಕಾರಿಗಳು ನಿಯಮಾ ಬಾಹೀರವಾಗಿ ಹಕ್ಕು ಬದಲಾವಣೆ ಮಾಡಿ ದಿನಾಂಕ:31.03.2026ರAದು ಪಹಣಿ ಮಾಡಿರುತ್ತಾರೆ. ಮೇಲ್ನೋಟಕ್ಕೆ ಅಧಿಕಾರಗಳು ತಮ್ಮ ಕರ್ತವ್ಯ ದುರುಪಯೋಗ ಮಾಡಿ ಭ್ರ‍್ರಷ್ಠಚಾರ ಮಾಡಿರುವುದು ಕಂಡು ಬಂದಿರುವುದರಿAದ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು  ಮತ್ತು ಹಕ್ಕು ಬದಲಾವಣೆ ಮಾಡಿ ಪಹಣಿ ಮಾಡಿರುವ ಆರ್.ಟಿ.ಸಿ.ಯನ್ನು ರದ್ದು ಪಡಿಸಬೇಕೆಂದು ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರ್ ಒತ್ತಾಯಿಸಿದ್ದಾರೆ.
WhatsApp Group Join Now
Telegram Group Join Now
Share This Article