*ದ್ವಿತೀಯ ಪಿಯುಸಿಯಲ್ಲಿ 566 ಅಂಕ ಪಡೆದು ವಿದ್ಯಾರ್ಥಿ ಟಿ. ಸಮೀರ್ ಸಾಧನೆ*

MK HasiruKranti
*ದ್ವಿತೀಯ ಪಿಯುಸಿಯಲ್ಲಿ 566 ಅಂಕ ಪಡೆದು ವಿದ್ಯಾರ್ಥಿ ಟಿ. ಸಮೀರ್ ಸಾಧನೆ*
WhatsApp Group Join Now
Telegram Group Join Now
ಬಳ್ಳಾರಿ: 13..ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ವಿದ್ಯಾರ್ಥಿ ಟಿ. ಸಮೀರ್ ಅವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಟಿ. ಸಮೀರ್ ಅವರು ಬಳ್ಳಾರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು, 2025-26ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 566 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಅವರ ಈ ಸಾಧನೆಯಿಂದ ಕಾಲೇಜಿಗೆ ಹಾಗೂ ದರೂರು ಗ್ರಾಮಕ್ಕೆ ಹೆಮ್ಮೆ ತಂದಿದ್ದು, ಊರಿನ ಪ್ರಮುಖರು, ಶಿಕ್ಷಕರು ಹಾಗೂ ಕುಟುಂಬ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article