“ಯುವಕರ ಸೇವೆ ದೇಶಕ್ಕೆ ದೊರಕಬೇಕು”

MK HasiruKranti
“ಯುವಕರ ಸೇವೆ ದೇಶಕ್ಕೆ ದೊರಕಬೇಕು”
WhatsApp Group Join Now
Telegram Group Join Now
ರಾಯಬಾಗ: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ, ತಾಯ್ನಾಡಿಗೆ ಮರಳಿ ಬರುವ ದೇಶದ ಯುವಕರ ಸೇವೆ ದೇಶಕ್ಕೆ ದೊರಕಬೇಕೆಂದು ಚಿತ್ರದುರ್ಗದ ಹೊಸದುರ್ಗ ಭಗೀರಥ ಮಠದ ಪುರುಷೋತ್ತಮ ಸ್ವಾಮೀಜಿ ಹೇಳಿದರು.
ಶನಿವಾರ ಕಂಕಣವಾಡಿ ಪಟ್ಟಣದ ನಾಯಿಕವಾಡಿ ತೋಟದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ಅಗ್ರಿಕಲ್ಚರಲ್ ಬಿಸಿನೆಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಶ್ರೀರಾಜ ಅರ್ಜುನ ನಾಯಿಕವಾಡಿ ಅವರ ಸತ್ಕಾರ ಮತ್ತು ಸ್ವಾಗತ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾಯಿಕವಾಡಿ ಕುಟುಂಬದ ಯುವಕರು ವಿವಿಧ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಇವರ ಕುಟುಂಬ ಮಾಡುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು. ನಮ್ಮ ದೇಶದ ಯುವ ಜನಾಂಗ ವಿದೇಶದಲ್ಲಿ ಅಧ್ಯಯನ ಕೈಗೊಂಡಿದ್ದರೂ, ದೇಶದ ಸಂಸ್ಕೃತಿ, ಸಂಸ್ಕಾರ ಮರೆಯದೇ ಇರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಬನಹಟ್ಟಿಯ ಮಹಾಂತ ದೇವರು, ಜಂಗಟಿಹಾಳದ ಯಲ್ಲಾಲಿಂಗೇಶ್ವರ ಮಠದ ಮಾತೋಶ್ರೀ ಸಂಗಮತಾಯಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಅರ್ಜುನ ನಾಯಿಕವಾಡಿ, ಧೂಳಗೌಡ ಪಾಟೀಲ, ಶ್ರೀಶೈಲ ಮಹಾಲಿಂಗೇಶ್ವರ, ನಾಗಯ್ಯ ಸ್ವಾಮಿ, ಕರೇಪ್ಪ ಪೂಜಾರಿ, ಶ್ರೀಮಂತ ಪೂಜಾರಿ, ಬಾಳಪ್ಪ ಅರಭಾವಿ, ಶಂಕರಗೌಡ ಪಾಟೀಲ, ರಾಜು ಕೊಟಗಿ, ತಮ್ಮಣ್ಣ ನಾಯಿಕವಾಡಿ, ಬಸವರಾಜ ಮಿರ್ದೆ, ಗುರುರಾಜ ನಾಯಿಕವಾಡಿ, ಲಕ್ಷ್ಮೀಕಾಂತ ಉಪ್ಪಾರ, ಸಚಿನ ನಾಯಿಕವಾಡಿ ಸೇರಿ ಅನೇಕರು ಇದ್ದರು.
ಫೋಟೊ: ೧೧ ರಾಯಬಾಗ ೫
ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಕಂಕಣವಾಡಿ ಪಟ್ಟಣದ ನಾಯಿಕವಾಡಿ ತೋಟದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ಅಗ್ರಿಕಲ್ಚರಲ್ ಬಿಸಿನೆಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಶ್ರೀರಾಜ ಅರ್ಜುನ ನಾಯಿಕವಾಡಿ ಅವರನ್ನು ಸತ್ಕರಿಸುತ್ತಿರುವ ಭಗೀರಥ ಮಠದ ಪುರುಷೋತ್ತಮ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಭರಮಣ್ಣ ಉಪ್ಪಾರ, ಮಹಾಂತ ದೇವರು, ಸಂಗಮತಾಯಿ, ಅರ್ಜುನ ನಾಯಿಕವಾಡಿ, ಬಸವರಾಜ ಮಿರ್ದೆ, ಸಚಿನ ನಾಯಿಕವಾಡಿ ಇದ್ದರು.
WhatsApp Group Join Now
Telegram Group Join Now
Share This Article