ಇಂಡಿ: ನಗರದ ಎಸ್.ಎಸ್.ವಿ.ವಿ ಸಂಘದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜೀನ ೨೦೨೫-೨೬ನೇ ಸಾಲೀನ ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೇಯ ಫಲಿತಾಂಶ ಶೇಕಡಾ ೮೬.೭೩ರಷ್ಟಾಗಿದೆ.
ಕಲಾ ವಿಭಾಗದ ವಿದ್ಯಾರ್ಥಿ ಸಂಗಮೇಶ ದಿವಟಗಿ ೫೭೮ ಅಂಕದೊಂದಿಗೆ ಪ್ರತಿಶತ ೯೬.೩೩ ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮಸ್ಥಾನ ಪಡೆದುಕೊಂಡಿದ್ದಾನೆ. ಇನ್ನೂ ದ್ವಿತೀಯ ಸ್ಥಾನವನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಅರವತ್ತು ೫೬೬ ಅಂಕದೊಂದಿಗೆ ಪ್ರತಿಶತ ೯೪.೩೩ ಅಂಕಗಳನ್ನು ಪಡೆದುಕೊಂಡಿದ್ದಾಳೆ. ಕಲಾ ವಿಭಾಗದ ವಿದ್ಯಾರ್ಥಿ ರಾವುತಪ್ಪ ಪೂಜಾರಿ ೫೪೫ ಅಂಕದೊಂದಿಗೆ ಪ್ರತಿಶತ ೯೦.೮೩ ರಷ್ಟು ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ತೃತಿಯ ಸ್ಥಾನ ಪಡೆದುಕೊಂಡು ಕಾಲೇಜಿಗೆ ಕಿರ್ತಿ ತಂದಕ್ಕೆ ಸಂಸ್ಥೆಯ ಅಧ್ಯಕ್ಷ ನಿಲಕಂಠಗೌಡ ಪಾಟೀಲ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜ : ದ್ವಿತೀಯ ಪಿಯುಸಿಯಲ್ಲಿ ಶೇಕಡಾ ೮೬.೭೩ ಫಲಿತಾಂಶ


