ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ : ಸತೀಶ್ ಜಾರಕಿಹೋಳಿ

Pratibha Boi
ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ : ಸತೀಶ್ ಜಾರಕಿಹೋಳಿ
WhatsApp Group Join Now
Telegram Group Join Now
ಸಂಕೇಶ್ವರ : ಶಾಸಕ ನಿಖಿಲ್ ಕತ್ತಿ ಅವರಿಗೆ ಹುಕ್ಕೇರಿ ಕ್ಷೇತ್ರದ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಆದರೆ ಅವರಿಗೆ ಇಚ್ಛಾಶಕ್ತಿ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪತ್ರಿಕಾಗೋಷ್ಠಿಯಲ್ಲಿ ಸಂಕೇಶ್ವರದಲ್ಲಿನ ಹದಗೆಟ್ಟ ರಸ್ತೆಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರಕಾರ ಇದ್ದಾಗ ನಾವು ಯಮಕನಮರಡಿ ಕ್ಷೇತ್ರದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಮಾಡಿದೇವೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ, ಸರಕಾರ ಯಾವುದೇ ಇರಲಿ, ಕ್ಷೇತ್ರ ಅಭಿವೃದ್ಧಿ ಪಡಿಸುವ ಇಚ್ಚಾಶಕ್ತಿ ಮುಖ್ಯವಾದದ್ದು,
ಸಂಕೇಶ್ವರದಲ್ಲಿ ಕುಳಿತು ಬೆಂಗಳೂರಿನ ಕಡೆ ಬೊಟ್ಟು ಮಾಡಿದರೆ ಸರಿಯಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಪರಿಶ್ರಮ ಮತ್ತು ಇಚ್ಛಾ ಶಕ್ತಿ ಮುಖ್ಯವಾದದ್ದು,  ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಈ ಸಂಧರ್ಭದಲ್ಲಿ ಹಿರಿರಾದ ಅಪ್ಪಾಸಾಹೇಬ್ ಶಿರಕೋಳಿ, ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಶಿ, ಮುಖಂಡರಾದ ಶ್ರೀಕಾಂತ ಹತನೂರೆ, ಬಸನಗೌಡ ಪಾಟೀಲ, ದಿಲೀಪ್ ಹೊಸಮನಿ, ಡಾ! ಜಯಪ್ರಕಾಶ ಕರಜಗಿ, ವಿಕ್ರಮ ಕರನಿಂಗ, ಶಂಕರರಾವ ಹೆಗಡೆ, ಅವಿನಾಶ ನಲವಡೆ, ಬಸವರಾಜ ಕೋಳಿ, ಮಹೇಶ ಹಟ್ಟಿವಳಿ ಸೇರಿದಂತೆ ಅನೇಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article