ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಸಂಘಕ್ಕೆ ೩೦,೨೦,೧೭೮/- ಲಾಭ

Pratibha Boi
ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಸಂಘಕ್ಕೆ ೩೦,೨೦,೧೭೮/- ಲಾಭ
WhatsApp Group Join Now
Telegram Group Join Now

ಯರಗಟ್ಟಿ: ಪಟ್ಟಣದ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಕಚೇರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಘದ ಎಂ.ಡಿ. ಶರಣಗೌಡ ಪಾಟೀಲ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅಭಿನವ ಸಿದ್ರಾಯಜ್ಜನವರ ನಮ್ಮ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಸಂಘವು ಸನ್ನ ೨೦೨೫-೨೬ ಸಾಲಿನಲ್ಲಿ ರೂ. ೩೦,೨೦,೧೭೮ /- ಲಾಭ ಗಲಿಸಿದೆ ಸನ್ ೨೦೨೫-೨೬ ನೇಯ ಸಾಲಿನ ಆರ್ಥಿಕ ವ?ದಲ್ಲಿ ಒಟ್ಟು ೩೦೩೮ ಸದಸ್ಯರನ್ನು ಹೊಂದಿದ್ದು, ರೂ. ೧೧,೩೨,೬೦೦/- ಶೇರು ಬಂಡವಾಳ ಹೊಂದಿದೆ. ರಿಜರ್ವ ಪಂಡ್ ರೂ. ೧,೦೯,೦೩,೭೯೫/-,ಠೇವಣಿಯು ರೂ. ೧೬,೯೨,೪೦,೫೦೬ /, ಸಾಲವು ರೂ. ೧೪,೦೧,೬೪,೩೩೨/-,ಹಾಗು ಒಟ್ಟು ದುಡಿಯುವ ಬಂಡವಾಳ ರೂ. ೧೮,೧೨,೭೬,೯೦೧ /ಇರುತ್ತದೆ . ವಿವಿಧ ಬ್ಯಾಂಕಗಳಲ್ಲಿ ರೂ. ೨,೫೦,೦೯,೬೦೧/-ಠೇವಣಿ ಇಡಲಾಗಿದೆ. ದೈನಂದಿನ ವ್ಯವಹಾರಕ್ಕಾಗಿ ವಿವಿಧ ಬ್ಯಾಂಕಗಳಲ್ಲಿ ರೂ. ೧,೭೫,೨೭,೨೭೫/- ಇರಿಸಿರುತ್ತೆವೆ. ಸಹಕಾರಿಯ ಒಟ್ಟು ವ್ಯವಹಾರ ೭೫,೧೧,೨೬,೨೧೯/-/- ಆಗಿರುತ್ತದೆ. ಸಹಕಾರಿಯು ೩ ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು. ಹಾಗೂ ಪ್ರಸಕ್ತ ಸಾಲಿನಲ್ಲಿ ಹುಲಕುಂದ, ಸಾಲಹಳ್ಳಿ, ಸುರೇಬಾನ, ಬೇನಕಟ್ಟಿ, ಇಂಚಲ, ಮುನವಳ್ಳಿಯಲ್ಲಿ ಶಾಖೆಗಳನ್ನು ಪ್ರಾರಂಬಿಸಲು ಅನುಮತಿ ನೀಡುವಂತೆ ಎಂ.ಡಿ. ಶರಣಗೌಡ ಪಾಟೀಲವರಿಗೆ ಪ್ರಸ್ತಾವನೆ ಸಲ್ಲಿಸಿದರು.

ಈ ವೇಳೆ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷರಾದ ಪವಿತ್ರಾ ಪೂಜೇರ ಉಪಾಧ್ಯಕ್ಷ ಶ್ರೀಶೈಲ ಸಿಂಗಾರಗೋಪ್ಪ, ಸೌಹಾರ್ದ ಅಭಿವೃದ್ಧಿ ಅಧಿಕಾರಿಯಾದ ರಾಚಯ್ಯ ಹಿರೇಮಠ, ಶಾಖಾ ವ್ಯವಸ್ಥಾಪಕರಾದ ಚಿದಂಬರ ಕದಂ, ಸಿಬಂದ್ದಿಯಾದೆ ರವಿ ಲಕ್ಷಶೆಟ್ಟಿ, ರವಿ ಉಳ್ಳಾಗಡ್ಡಿ, ಯಮನೂರ ಮಾಕ್ಕನ್ನವರ, ರಮೇಶ ಹಳದಿ, ಗುರು ಬಡಿಗೇರ, ಮತ್ತು ಆಡಳಿತ ಮಂಡಳಿಯ ಸದಸ್ಯರು ಇದ್ದರು.

 

 

WhatsApp Group Join Now
Telegram Group Join Now
Share This Article