ಕುಕುನೂರು : ತಾಲ್ಲೂಕಿನ ತಳಕಲ್ ಗ್ರಾಮದ ವಾಹಿದ ಜಾಕೀರ್ ಹುಸೇನ್ ಕೊಪ್ಪಳ ಎನ್ನುವ ವಿದ್ಯಾರ್ಥಿನಿ ಗಂಗಾವತಿ ನಗರದ ವಿದ್ಯಾನಿಕೇತನ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ 600ಕ್ಕೆ 578 ಅಂಕ ಪಡೆದು ಶೇ. 96.33% ರಷ್ಟು ಸಾಧನೆ ಮಾಡಿ ಕಾಲೇಜಿಗೆ ಡಿಸ್ಟಿಂಕ್ಸನ್ ಪಡೆದು ಕೀರ್ತಿ ತಂದಿದ್ದಾಳೆ.
ಈ ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಪ್ರಾಂಶುಪಾಲರಾದ ಟಿ. ಜಗನ್ನಾಥ ಹಾಗೂ ಕಾಲೇಜು ಉಪನ್ಯಾಸಕರು ಹಾಗೂ ಸಂಸ್ಥಾಪಕರಾದ ನೆಕ್ಕಂಟಿ ಸೂರಿ ಬಾಬು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತ ಪಡಿಸಿದ್ದಾರೆ.


