MK HasiruKranti
WhatsApp Group Join Now
Telegram Group Join Now

ರಾಯಬಾಗ: ತಾಲೂಕಿನ ಭೆಂಡವಾಡ ಗ್ರಾಮದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಂ ಎಸ್ ಐಹೊಳೆ ಪಿ ಯು ಕಾಲೇಜಿನ ಫಲಿತಾಂಶ ಶೇ. 95 ಆಗಿದೆ.

 ವಾಣಿಜ್ಯ ವಿಭಾಗದಲ್ಲಿ ಶ್ರೀದೇವಿ ಅಂದಾನಿ ಶೇ. 95.5 ಅಂಕ ಪಡೆದು ಪ್ರಥಮ,  ಲಕ್ಷ್ಮೀ ಯಳ್ಳೂರೆ ಶೇ. 85.33 ದ್ವಿತೀಯ ಹಾಗೂ ಚಿನ್ನವ್ವ ಕಂಬಾರ ಶೇ. 85.16 ತೃತೀಯ ಸ್ಥಾನ ಪಡೆದರು. ಕಲಾ ವಿಭಾಗದಲ್ಲಿ ವರ್ಷಿಣಿ ಕದಂ ಶೇ.91.5 ಅಂಕ ಪಡೆದು ಪ್ರಥಮ, ಆರತಿ ಗಿರೋಜಿ ಶೇ. 90.33 ದ್ವೀತಿಯ ಮತ್ತು ಲಕ್ಷ್ಮೀ ಗಿರೋಜಿ ಶೇ. 90 ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ಸಾಧನೆ ಮಾಡಿದ  ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ, ಶಾಸಕ ಡಿ.ಎಮ್.ಐಹೊಳೆ, ಕಾರ್ಯದರ್ಶಿ ಅರುಣ ಐಹೊಳೆ ಹಾಗೂ ಪ್ರಾಚಾರ್ಯರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article