ದ್ವಿತೀಯ ಪಿಯು ಕಾಮರ್ಸ್ ನಲ್ಲಿ 97% ಅಂಕ ಪಡೆದ ಶ್ರೇಯಾಂಕಿತ

Pratibha Boi
ದ್ವಿತೀಯ ಪಿಯು ಕಾಮರ್ಸ್ ನಲ್ಲಿ 97% ಅಂಕ ಪಡೆದ ಶ್ರೇಯಾಂಕಿತ
WhatsApp Group Join Now
Telegram Group Join Now
ಬಳ್ಳಾರಿ, ಏ.10: ನಗರದ ಮೇಧಾ ಕಾಲೇಜಿನ ದ್ವೀತಿಯ ಪಿಯು ವಾಣಿಜ್ಯ(ಕಾಮರ್ಸ್) ವಿಭಾಗದಲ್ಲಿ 582 ಅಂಕಗಳಿಸುವ ಮೂಲಕ ಶೇ 97 ರಷ್ಟು ಸಾಧನೆ ಮಾಡಿದ್ದಾರೆ ಕೆ.ಎಚ್.ಎಂ.. ಶ್ರೇಯಾಂಕಿತ.
ಇವರು ನಗರದ ಖ್ಯಾತ ಜ್ಯೋತಿಷಿಗಳು ಹಾಗೂ ಶತಾಯುಷಿಗಳಾಗಿದ್ದ ಸೂಗಯ್ಯ ಶಾಸ್ತ್ರಿಗಳ ಕಿರಿಯ ಪುತ್ರ ಜ್ಯೋತಿಷಿ ಮಲ್ಲಿಕಾರ್ಜುನ ಸ್ವಾಮಿಯವರ
ಕಿರಿಯ ಪುತ್ರಿಯಾಗಿದ್ದಾರೆ. 600 ಕ್ಕೆ 582 ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.
ಶ್ರೇಯಾಂಕಿತಳಿಗೆ, ಪಾಲಕ ಪೋಷಕರು, ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ಗುಲ್ಬರ್ಗ ವಿವಿಯ ಸೆನೆಟ್, ಸಿಂಡಿಕೇಟ್ ನ ಮಾಜಿ ಸದಸ್ಯ ಕೆ.ಎಂ.ಮಹೇಶ್ವರ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article