ಯುವಕ, ಯುವತಿಯರು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಿ :ಮಹಾಂತೇಶ ದೊಡ್ಡಗೌಡರ 

MK HasiruKranti
ಯುವಕ, ಯುವತಿಯರು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಿ :ಮಹಾಂತೇಶ ದೊಡ್ಡಗೌಡರ 
WhatsApp Group Join Now
Telegram Group Join Now

 

ನೇಸರಗಿ.ಮೊದಲು ಗ್ರಾಮೀಣ ಮಟ್ಟದಲ್ಲಿ, ರಾಜ್ಯ, ದೇಶಿಯ ಮಟ್ಟದ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಯುವಕ, ಯುವತಿಯರು  ಅನೇಕ ಕ್ರೀಡೆಗಳಲ್ಲಿ  ಪಾಲ್ಗೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
    ಅವರ ಇಲ್ಲಿಗೆ ಸಮೀಪದ ಮದನಬಾವಿಯ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಮಹಾಂತೇಶ ದೊಡ್ಡಗೌಡರ ಅಭಿಮಾನಿಗಳು ಆಯೋಜನೆ ಮಾಡಿದ್ದ  ಗ್ರಾಮೀಣ ಮಟ್ಟದ  ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಜಾತ್ರಾ ಸಮಯದಲ್ಲಿ ಇಂತಹ ಪಂದ್ಯಾವಳಿಗಳನ್ನು ಮದನಬಾವಿ ಗ್ರಾಮದ ಯುವಕರು ಆಯೋಜನೆ ಮಾಡುತ್ತಿರುವದು ಹೆಮ್ಮೆಯ ವಿಷಯ ವಿಷಯ ಎಂದರು.
     ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಪ್ಪ ಗುಜನಾಳ, ಯಲ್ಲನಗೌಡ ದೊಡ್ಡಗೌಡರ, ಅಜ್ಜಪ್ಪ ಹಮ್ಮಿನಿ, ಈರನಗೌಡ ದೊಡ್ಡಗೌಡರ, ಚನಗೌಡ ಹಾದಿಮನಿ, ಬಸವರಾಜ ಬಂದ್ರಿ, ಸೋಮಪ್ಪ ಕೊಳದೂರ, ಅಣ್ಣಯ್ಯ ನಂಜರಗಿ, ಪ್ರದೀಪ್ ದೊಡ್ಡಗೌಡರ, ಅಡಿವಪ್ಪ ಹೊಸಮನಿ  ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮಸ್ಥರು, ಶ್ರೀ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದ ಸದಸ್ಯರು, ವ್ಹಾಲಿಬಾಲ್ ಆಟಗಾರರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article