ಬೆಳಗಾವಿ: ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವು ಭಾನುವಾರ 12 ರಂದು ಮಧ್ಯಾಹ್ನ 3:30ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಆದರ್ಶ ವ್ಯಕ್ತಿ ಪ್ರಶಸ್ತಿ ಸ್ವೀಕರಿಸುತ್ತಿರುವ ರಮೇಶ ಟಿ. ಜಂಗಲ್ ಹಾಗೂ ಆದರ್ಶ ತಂದೆ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಜಯಕುಮಾರ್ ಕಮ್ಮಾರ ಆಗಮಿಸುವರು. ದಾನಿಗಳಾದ ಜಯಶೀಲಾ ಬ್ಯಾಕೋಡ ಹಾಗೂ ಡಾ. ವಿಜಯಲಕ್ಷ್ಮಿ ಪುಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ವಹಿಸಲಿದ್ದಾರೆ.
ಎಲ್ಲಾ ಸಾಹಿತ್ಯ ಆಸಕ್ತ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಸಂಘದ ಕಾರ್ಯದರ್ಶಿ ಆಶಾ ಎಸ್ ಯಮಕನಮರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

