ಘಟಪ್ರಭಾ: ಬಾಣಂತಿಯರ ಆರೋಗ್ಯ ಹಾಗೂ ನವಜಾತ ಶಿಶುಗಳ ಸುರಕ್ಷತೆ ನಮ್ಮ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದ್ದು, ಈ ಕಿಟ್‌ಗಳು ತಾಯಂದಿರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ಶಿಶುಗಳ ಸಮರ್ಪಕ ಆರೈಕೆಗೆ ಸಹಕಾರಿಯಾಗಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಿ.ಕೆ.ಎಚ್. ಪಾಟೀಲ ಹೇಳಿದರು.
ಅವರು ಮಂಗಳವಾರ ರಂದು ಸ್ಥಳೀಯ ಶ್ರೀ ಜೆ. ಜಿ. ಸಹಕಾರಿ ಆಸ್ಪತ್ರೆ ಸೊಸಾಯಿಟಿ ನಿಯಮಿತ, ಘಟಪ್ರಭಾ ವತಿಯಿಂದ ಅಮೃತ ಮಹೋತ್ಸವ ಪರ್ವ ೨೦೨೬ ರ ಅಂಗವಾಗಿ ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗದ ಆಶ್ರಯದಲ್ಲಿ ೭೫ ಬಾಣಂತಿಯರಿಗೆ ಅಗತ್ಯ ವಸ್ತುಗಳನ್ನು ಒಳಗೊಂಡ ಆರೋಗ್ಯ ಕಿಟ್‌ಗಳನ್ನು ವಿತರಿಸಿ ಮಾತನಾಡಿ ತಾಯಿ ಮತ್ತು ಶಿಶು ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಈ ಕಿಟ್‌ಗಳ ವಿತರಣೆಯಿಂದ ಬಾಣಂತಿಯರಲ್ಲಿ ಸ್ವಚ್ಚತೆ, ಪೋಷಣೆಯ ಅರಿವು ಹೆಚ್ಚುವ ಸಾಧ್ಯತೆ ಇದ್ದು, ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ತಾಯಂದಿರಿಗೆ ಅಗತ್ಯ ನೆರವು ದೊರಕುವ ಮೂಲಕ ಅವರ ಆರೋಗ್ಯದಲ್ಲಿ ಉತ್ತಮ ಬದಲಾವಣೆ ನಿರೀಕ್ಷಿಸಲಾಗಿದೆ. ಇದರಿಂದ ನವಜಾತ ಶಿಶುಗಳ ಆರೈಕೆಯ ಮಟ್ಟ ಸುಧಾರಿಸದೇ ತಾಯಿ-ಮಗು ಮರಣ ಪ್ರಮಾಣ ಕಡಿಮೆ ಮಾಡುವ ದಿಶೆಯಲ್ಲಿ ಸಹಕಾರಿಯಾಗಲಿದೆ ಹಾಗೂ ಸಮುದಾಯದಲ್ಲಿ ಆರೋಗ್ಯ ಸೇವೆಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿದೆ ಎಂದರು
ಕಾರ್ಯಕ್ರಮದ ಅಂತ್ಯದಲ್ಲಿ ಫಲಾನುಭವಿಗಳು ಸಂಸ್ಥೆಯ ಸೇವೆಯನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ವರ್ಗದವರು. ಇದ್ದರು
ಬಾಣಂತಿಯರಿಗೆ ಆರೋಗ್ಯ ಕಿಟ್ ವಿತರಣೆ


