ಗದಗ : ನಗರದ ಹೋಟೆಲ್ ಒಡೆಯರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಇದೇ ಏ. ೧೦ ರಂದು ಶುಕ್ರವಾರ ಬೆಳಿಗ್ಗೆ ೧೦.೩೦ ಘಂಟೆಗೆ ನೂತನ ಬಸ್ ನಿಲ್ದಾಣದ ಹತ್ತಿರವಿರುವ ಸ್ವರಾಜ್ ಟ್ರಾಕ್ಟರ್ ಶೋರೂಮ್ ಹಿಂದುಗಡೆ ಜರುಗಲಿದೆ ಎಂದು ಹೋಟೆಲ್ ಒಡೆಯರ ಸಂಘದ ಜಿಲ್ಲಾಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಾಕ್ಷರಾದ ಡಿ.ಆರ್. ಪಾಟೀಲ, ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷರಾದ ಜಿ.ಕೆ.ಶೆಟ್ಟಿ ಆಗಮಿಸುವರು. ಅಧ್ಯಕ್ಷತೆಯನ್ನು ಹೋಟೆಲ್ ಒಡೆಯರ ಸಂಘದ ಜಿಲ್ಲಾಧ್ಯಕ್ಷರಾದ ಎಚ್. ವಿಶ್ವನಾಥ ಶೆಟ್ಟಿ ವಹಿಸುವರು. ಅಹ್ವಾನಿತರಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿ, ನಗರಸಭೆ ಸದಸ್ಯೆ ಪದ್ಮಾ ಕಟಗಿ, ಹೋಟೆಲ್ ಒಡೆಯರ ಸಂಘದ ಗೌರವಾಧ್ಯಕ್ಷರುಗಳಾದ ಕೆ.ಸುಧಾಕರರಾವ ಹಾಗೂ ಬಿ. ರಾಜೀವ ಶೆಟ್ಟಿ ಅವರು ಉಪಸ್ಥಿತರಿರುವರು ಎಂದು ಹೇಳಿದರು.
ಈಗ ೪೫ ವರ್ಷಗಳ ಹಿಂದೆ ಅಂದಿನ ಹೋಟೆಲ್ ಉದ್ದಿಮೆದಾರರಾದ ಕೆ. ನಾರಾಯಣರಾವ್, ಶಂಕರರಾವ್, ಸುಧಾಕರ ರಾವ್, ಭಾಗವತರು, ಮೈಯ್ಯರ ರವರು, ಶಿವಪುರ ರವರು, ಪಿ. ಡಿ ಕಾಮತ್ ರವರು, ಎನ್.ಎನ್. ಶಾನಭಾಗ ರವರು, ಗದಗ ರೆಸ್ಟೋರೆಂಟ್ ಜಯದೇವ ಬಟ್ಟರು, ಅಜಂತಾ ಹೋಟೆಲ್ ಶೇಖರ ಶೆಟ್ಟಿ, ಕೃಷ್ಣ ವಿಲಾಸ ಉಚ್ಚಿಲ್ ರವರು, ಸುಖನಿವಾಸ ಖಾರಂತವರು, ಅಯೋದ್ಯ ಹೋಟೆಲ್ ಬಿ.ರಾಜೂಶೆಟ್ಟಿಯವರು ಮೊದಲಾದವರಿಂದ ಪ್ರಾರಂಭಗೊಂಡ ಗದಗ-ಬೆಟಗೇರಿ ಹೋಟೆಲ್ ಸಂಘವು ಅಂದಿನಿಂದ ಇಂದಿನವರೆಗೆ ಕ್ರೀಯಾಶೀಲವಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಗದಗ ಜನತೆಗೆ ಕೊಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.
ಸುಧೀರ್ಘ ಇತಿಹಾಸವನ್ನು ಹೊಂದಿದ ನಮ್ಮ ಈ ಸಂಘ ಅನೇಕ ಏಳು ಬೀಳುಗಳನ್ನು ಕಂಡು ಉತ್ತಮ ಹಾದಿಯನ್ನು ಸವೆಸಿ ಇಂದು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದುತ್ತಿರುವುದು ನಮ್ಮ ಎಲ್ಲಾ ಸದಸ್ಯರಿಗೂ ಅತೀವ ಹೆಮ್ಮೆಯ ವಿಷಯ. ವೃತ್ತಿ ಬದುಕಿನಲ್ಲಿ ಸಾರ್ಥಕತೆ ಕಂಡು ಕೊಂಡ ಹೆಮ್ಮೆ. ನಮ್ಮ ಈ ಸ್ವಂತ ಕಟ್ಟಡ ಕಟ್ಟುವ ಸಾಹಸಕ್ಕೆ ಶ್ರಮವಹಿಸಿ ತನು, ಮನ, ಧನ ಸಮೇತ ತಮ್ಮನ್ನು ತೊಡಗಿಸಿಕೊಂಡು ನನಗೆ ಶಕ್ತಿ ತುಂಬಿ ಪ್ರೋತ್ಸಾಹಿಸಿದ ನಮ್ಮ ಎಲ್ಲಾ ಸಂಘದ ಸದಸ್ಯರು ಮತ್ತು ರಾಜ್ಯಾಧ್ಯಕ್ಷರಾದ ಜಿ.ಕೆ. ಶೆಟ್ಟಿಯವರು ಹಾಗೂ ನಮಗೆ ಧನಸಹಾಯ ಮಾಡಿ ನಮ್ಮ ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದಾರೆ,
ಸಂಘವು ತನ್ನ ಸುದೀರ್ಘ ಪಯಣದಲ್ಲಿ ಎಲ್ಲಾ ಹೋಟೆಲ್ ನವರು ಸಣ್ಣದಾಗಿ ಪಿಗ್ಮಿ ಖಾತೆಯಿಂದ ಸಂಗ್ರಹಿಸಿದ ೩೫ ಲಕ್ಷ ರೂಪಾಯಿ. ಇದರಲ್ಲಿ ೨೦ ಲಕ್ಷ ವೆಚ್ಚದಲ್ಲಿ ಸಂಘದ ಸದಸ್ಯರ ಒಪ್ಪಿಗೆ ಮೇರೆಗೆ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ಜಾಗವನ್ನು ಖರೀದಿ ಮಾಡಲಾಯಿತು. ೫ ಲಕ್ಷ ರೂಗಳನ್ನು ೨೦೨೨ ರಲ್ಲಿ ನಾನು ಅಧ್ಯಕ್ಷನಾದಾಗ ಕಟ್ಟಡ ನಿರ್ಮಾಣದ ಕನಸು ಕಂಡು ಕಟ್ಟಡದ ಕೆಲಸವನ್ನು ಪ್ರಾರಂಭಮಾಡಿದೆವು. ಪ್ರಾರಂಭ ಮಾಡುವಾಗ ೧೫ ಲಕ್ಷ ರೂಪಾಯಿ ಸಂಘದ ಖಾತೆಯಲ್ಲಿತ್ತು. ಇದಕ್ಕೆ ಒಟ್ಟಿಗೆ ೪೦ ಲಕ್ಷ ಕಟ್ಟಡ ಪೂರ್ಣ ಗೊಳಿಸಲು ಅವಶ್ಯವಾಗಿತ್ತು. ಇದರಲ್ಲಿ ನಮ್ಮ ಸಂಘದ ಸದಸ್ಯರಿಂದ ೧೫ ಲಕ್ಷವನ್ನು ಧನ ಸಹಾಯ ಪಡೆದು ಉಳಿದ ಹಣವನ್ನು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ರೂಪಾಯಿಗಳನ್ನು ಹೆಚ್. ಕೆ. ಪಾಟೀಲರವರಿಂದ ಇನ್ನೂ ಉಳಿದ ೫ ಲಕ್ಷವನ್ನು ದಾನಿಗಳಿಂದ ಪಡೆದು ಕಟ್ಟಡದ ಕೆಲಸವನ್ನು ಪೂರ್ಣ ಗೊಳಿಸಲಾಗಿದೆ. ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಕಾವ್ಯಂಶ್ರೀ ಯವರು ಈಗ ನಮ್ಮೊಂದಿಗಿಲ್ಲ ಅವರನ್ನು ಈ ಸಂಧರ್ಭದಲ್ಲಿ ನಾನು ಸ್ಮರಿಸುತ್ತಾ ಸಂಘದ ಪರವಾಗಿ ಶೃದ್ದಾಂಜಲಿ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಸುಧಾಕರ ಶೆಟ್ಟಿ, ಜಯಪಾಲ ಶೆಟ್ಟಿ, .ಪಿ.ವಿ. ಹೆಗಡೆ, ಕೆ.ಎ ಸುಧಾಕರರಾವ್, ಬಿ.ರಾಜೀವ ಶೆಟ್ಟಿ, ಯಲ್ಲಪ್ಪ ಬಾವಿಕಟ್ಟಿ, ಉಮೇಶ ಶಾನಬಾಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


