ನೇಸರಗಿ. ಇಲ್ಲಿಗೆ ಸಮೀಪದ ಮದನಬಾವಿ ಗ್ರಾಮದಲ್ಲಿ 11 ವರ್ಷಗಳ ನಂತರ ನಡೆಯುತ್ತಿರುವ ಶ್ರೀ ಗ್ರಾಮದೇವತೆಯ ಜಾತ್ರಾ ಪ್ರಯುಕ್ತ ಬುಧವಾರದಂದು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ತಂಗಿದ್ದ ಗ್ರಾಮದೇವಿ ಗದ್ದುಗೆಯಲ್ಲಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಬೇಟಿ ನೀಡಿ ತಾಯಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ರವಿ ಸಿದ್ದಮ್ಮನವರ, ಮಲ್ಲೇಶ ಗುಜನಾಳ, ಬಾಬು ಮರಿಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


