ಹೋಂಗಾರ್ಡ್ಸ್ ಮತ್ತು ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡದಂತೆ ಡಿಜಿಪಿಗೆ ಪತ್ರ

MK HasiruKranti
ಹೋಂಗಾರ್ಡ್ಸ್ ಮತ್ತು ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡದಂತೆ ಡಿಜಿಪಿಗೆ ಪತ್ರ
WhatsApp Group Join Now
Telegram Group Join Now
ಬೆಂಗಳೂರು: 09, ರಾಜ್ಯದಲ್ಲಿ ಗೃಹ ರಕ್ಷಕದಳ ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ನಿಯಮಬಾಹಿರವಾಗಿ ವಾಹನ ತಪಾಸಣಾ ನೆಪದಲ್ಲಿ ವಾಹನ ಸವಾರರಿಗೆ ಕಿರುಕುಳ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಿ ಅಗತ್ಯ ಎಚ್ಚರಿಕೆ ನೀಡಿ ಕಾನೂನು ಬಾಹಿರ ವಾಹನ ತಪಾಸಣಾ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಪತ್ರ ಬರೆದಿದ್ದಾರೆ!
ಮೋಟಾರ್ ವಾಹನ ಕಾಯ್ದೆ-1988 ಹಾಗೂ ಕರ್ನಾಟಕ ಮೋಟಾರ್ ವಾಹನಗಳ ನಿಯಮಗಳು-1989ರಡಿಯಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎ.ಎಸ್.ಐ) ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ವಾಹನ ತಪಸಣಾ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಢ ವಿಧಿಸುವ ಅಧಿಕಾರ ಹೊಂದಿರುತ್ತಾರೆ, ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ ಟೇಬಲ್‌ರವರುಗಳಿಗೆ ಎಫ್.ಟಿ.ವಿ.ಆರ್ ವರದಿಯನ್ವಯ ಟ್ರಾಫಿಕ್ ಚಲನ್‌ ಗಳನ್ನು ನೀಡಲು ಅವಕಾಶವಿದ್ದು ಮೋಟಾರ್ ವಾಹನ ಕಾಯ್ದೆ ಕಲಂ 133ರ ಪ್ರಕಾರ ಎಫ್.ಟಿ.ವಿ.ಆರ್ ನೋಟಿಸ್ ನೀಡಬಹುದಾಗಿರುತ್ತದೆ, ಆದರೆ ಯಾವುದೇ ಅಧಿಕಾರ ಹೊಂದದೆ ಇರುವ ಗೃಹ ರಕ್ಷಕದಳದ ಸಿಬ್ಬಂದಿಗಳು ಮತ್ತು ಆಯಾ ಠಾಣೆಯ ಠಾಣಾಧಿಕಾರಿಗಳ ಹಾಗೂ ಗಸ್ತುವಾಹನಕ್ಕೆ ಚಾಲಕರಾಗಿ ಕರ್ತವ್ಯನಿರ್ವಹಿಸುತ್ತಿರುವ ಸಶಸ್ತ್ರ ಪಡೆಯ ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸರ್ಕಾರಿ ವಾಹನಗಳನ್ನು ಬಳಸಿಕೊಂಡು ನಿಯಮಬಾಹಿರವಾಗಿ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವುದು, ಸಾರ್ವಜನಿಕರ ವಾಹನಗಳ ಕೀ ಕಿತ್ತುಕೊಂಡು ಕೇಸ್ ದಾಖಲಿಸುವುದಾಗಿ ಹೆದರಿಸಿ ಬೆದರಿಸಿ, ವಾಹನ ಚಾಲಕರ ಮೇಲೆ ದೌರ್ಜನ್ಯ, ಹಲ್ಲೆ, ಕಿರುಕುಳ, ಅವಹೇಳನಕಾರಿ ಅವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿವುದು ಮತ್ತು ನಗರ ಪ್ರದೇಶಗಳನ್ನು ಹೊರತು ಪಡಿಸಿ ಗ್ರಾಮಾಂತರ ಜಿಲ್ಲೆಗಳಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ, ಗ್ರಾಮೀಣ ಹಾಗೂ ನಗರದ ನಿರ್ಜನ ಪ್ರದೇಶಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ವೈಯಕ್ತಿಕವಾಗಿ ಗೃಹ ರಕ್ಷಕದಳ ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳನ್ನು ಅಡ್ಡಹಾಕಿ ಕಾನೂನು ಬಾಹಿರವಾಗಿ ವಾಹನ ತಪಸಣಾ ಮಾಡುತ್ತಿದ್ದು ಮತ್ತು ಸಾರ್ವಜನಿಕರಿಂದ ಅನಧಿಕೃತವಾಗಿ ಅಕ್ರಮ ಹಣವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಹಾಗೂ ಕೆಲವು ಸಿಬ್ಬಂದಿಗಳು ಹಣವಸೂಲಿ ಮಾಡುವ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತವೆ, ಸದರಿ ಸಿಬ್ಬಂದಿಗಳ ಅಧಿಕಾರ ದುರುಪಯೋಗ, ದುರ್ನಡತೆಯಿಂದ ನೊಂದ ಸಾರ್ವಜನಿಕರು ದೂರವಾಣಿ ಮುಖಾಂತರ ಹಾಗೂ ಪ್ರಾಧಿಕಾರದ ಕಛೇರಿಗೆ ಭೇಟಿ ನೀಡಿ ಸದರಿ ನಡೆಯ ವಿರುದ್ದ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮೋಟಾರ್ ವಾಹನ ಕಾಯ್ದೆಯಲ್ಲಿ ನಿಗದಿ ಪಡಿಸಿದ ಅಧಿಕಾರಿಗಳನ್ನು ಹೊರತು ಪಡಿಸಿ ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯ ಗೃಹ ರಕ್ಷಕದಳ ಹಾಗೂ ಎಲ್ಲಾ ಘಟಕದ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ಸಾರ್ವಜನಿಕ ಹಾಗೂ ಇತರೆ ಯಾವುದೇ ವಾಹನಗಳನ್ನು ತಡೆಯದಂತೆ, ತಪಾಸಣಾ ಮಾಡದಂತೆ ಕಟ್ಟುನಿಟ್ಟಿನ ಸೂಕ್ತ ಆದೇಶ/ಸುತ್ತೋಲೆಯನ್ನು ಹೊರಡಿಸಿ ಮೇಲೆ ತಿಳಿಸಿದ ದುರ್ನಡತೆಗಳು ಮರುಕಳಿಸದಂತೆ ಆಯಾ ಠಾಣೆ ಮತ್ತು ಘಟಕಗಳಲ್ಲಿ ದಿನದ ರೋಲ್ ಕಾಲ್ ಸಮಯದಲ್ಲಿ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಅಗತ್ಯ ಎಚ್ಚರಿಕೆಯನ್ನು ನೀಡುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ
ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ
WhatsApp Group Join Now
Telegram Group Join Now
Share This Article