ಕುಕನೂರು : ವಿಶ್ವ-ವಿಜಯ ಪತ್ರಿಕೆಯ 21ನೇ ವರ್ಷಾಚರಣೆಯ ಅಂಗವಾಗಿ ಪತ್ರಿಕಾ ರಂಗದಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಕೊಡಮಾಡುವ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಕುಕನೂರು ತಾಲೂಕ ವರದಿಗಾರ ಚನ್ನಯ್ಯ ಹಿರೇಮಠ ಇವರನ್ನು ಆಯ್ಕೆ ಮಾಡಲಾಗಿದೆ.
ನಾಡಿನೆಲ್ಲೆಡೆ ಎಲೆಮರೆ ಕಾಯಿಯಂತೆ ಉಳಿದಿರುವ, ಉಳಿಯುತ್ತಿರುವ ವಿವಿಧ ಕ್ಷೇತ್ರದಲ್ಲಿ ವಿಷೇಶವಾಗಿ ಪತ್ರಿಕಾ ಮಾಧ್ಯಮ ಹಾಗೂ ಟಿ. ವಿ ಮಾಧ್ಯಮ, ತಾಂತ್ರಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುತ್ತಿರುವುದಕ್ಕಾಗಿ ಹುಬ್ಬಳ್ಳಿಯ ಸಂಗೋಳ್ಳಿ ರಾಯಣ್ಣ ನಗರದ ಡಾ. ಬಿ. ಆರ್ ಅಂಂಬೇಡ್ಕರ ಸಭಾ ಭವನದಲ್ಲಿ ಏಪ್ರೀಲ್ 26.04.2026ರಂದು ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಚನ್ನಯ್ಯ ಹಿರೇಮಠ ಇವರಿಗೆ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವ್ಯವಸ್ಥಾಪಕ ಸಂಪಾದಕರಾದ ಮಾರುತಿ. ಎಂ ಬುರುಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


