ಮಹಾಲಿಂಗಪುರ: ನಮ್ಮ ಸುತ್ತಲಿನ ಪರಿಸರ ಉತ್ತಮವಾಗಿದ್ದರೆ ಜೀವನ ಕೂಡ ಅತ್ಯುತ್ತಮವಾಗಿರುತ್ತದೆ ಎಂದು ಮಹಾಲಿಂಗಪುರ ಕೆಎಲ್ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಜೀವನದ ಮೇಲೆ ಸುತ್ತಲಿನ ನೈಸರ್ಗಿಕ ಪರಿಸರ ಮತ್ತು ಸಾಮಾಜಿಕ ಪರಿಸರ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಮಕ್ಕಳು ಗಿಡ ಮರ ಬೆಳೆಸಿ, ನದಿ ತೊರೆ ಉಳಿಸುವ ಮೂಲಕ ನೈಸರ್ಗಿಕ ಪರಿಸರವನ್ನು ಹಾಗೂ ಉತ್ತಮರ ಸ್ನೇಹ, ಸಹವಾಸ ಮಾಡುವ ಮೂಲಕ ಸಾಮಾಜಿಕ ಪರಿಸರ ಉತ್ತಮವಾಗಿರಿಸಿಕೊಳ್ಳಬೇಕು ಎಂದರು.
ಹಿರಿಯ ಶಿಕ್ಷಕ ವಿ.ಡಿ.ಬಂಡಿ ಮಾತನಾಡಿ, ತೋಟದ ಶಾಲೆಯಾದರೂ ಯಾವುದೇ ಕೊರತೆ ಇಲ್ಲದಂತೆ ಕಂಗೊಳಿಸುತ್ತಿರುವ ಶಾಲೆಯಲ್ಲಿ ಮಕ್ಕಳ ಕೈದೋಟ ಮತ್ತು ಉದ್ಯಾನ ಮತ್ತಷ್ಟು ಮೆರಗು ತಂದಿದ್ದು, ಇಲ್ಲಿನ ಪರಿಸರ ಪ್ರೇಮಕ್ಕೆ ನಿದರ್ಶನವಾಗಿದೆ ಎಂದರು.
ಹಿರಿಯರಾದ ಮುತ್ತಪ್ಪಜ್ಜ ಒಡೆಯರ, ಯಮನಪ್ಪ ನಾಗರಾಳ, ಎಸ್ಡಿಎಂಸಿ ಅಧ್ಯಕ್ಷ ಹನಮಂತ ಒಡೆಯರ, ಗ್ರಾಪಂ ಸದಸ್ಯ ಮಲ್ಲು ಜಗದಾಳ, ಹಿರಿಯ ಶಿಕ್ಷಕ ವಿ.ಡಿ.ಬಂಡಿ, ಸಹಶಿಕ್ಷಕ ಪಿ.ಆರ್.ಮಲ್ಲಾರಿ, ಮುಖ್ಯ ಶಿಕ್ಷಕ ಜಯಪ್ರಕಾಶ ಆನೂರ, ಪಿಡಿಒ ರಂಜಿತಾ ಹತ್ತಿ ಇದ್ದರು.
೬ ಎಂಎಲ್ಪಿ ೧
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಶಿವಲಿಂಗ ಸಿದ್ನಾಳ ಮಾತನಾಡಿದರು.
೬ ಎಂಎಲ್ಪಿ ೧ಎ
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಮಕ್ಕಳು ಸಿದ್ದಗೊಳಿಸಿದ ಕೈದೋಟ ಮತ್ತು ಉದ್ಯಾನ ಗಮನ ಸೆಳೆಯಿತು.
ಉತ್ತಮ ಪರಿಸರದಿಂದ ಅತ್ಯುತ್ತಮ ಜೀವನ ಸಾಧ್ಯ: ಶಿವಲಿಂಗ ಸಿದ್ನಾಳ


