ವಾತ್ಸಲ್ಯ ಮನೆ ಹಸ್ತಾಂತರಿಸಿದ ಧರ್ಮಸ್ಥಳ ಸಂಘದ ಅಧಿಕಾರಿಗಳು

MK HasiruKranti
ವಾತ್ಸಲ್ಯ ಮನೆ ಹಸ್ತಾಂತರಿಸಿದ ಧರ್ಮಸ್ಥಳ ಸಂಘದ ಅಧಿಕಾರಿಗಳು
WhatsApp Group Join Now
Telegram Group Join Now

 

ಮುಧೋಳ: ಏ.೦೮.,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಧೊಳ ತಾಲೂಕಿನ ಉತ್ತೂರ ಗ್ರಾಮದ ಹಣಮವ್ವ ಕುಳಲಿ ಇವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲೆಯ ಜಿಲ್ಲಾ ನಿರ್ದೇಶಕ ಚನ್ನಕೇಶವ ಆಧಿಕಾರಿಯು ಉದ್ಘಾಟನೆ ನೆರವೇರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ನಿರ್ಗತಿಕರಿಗೆ ದಾನಿಗಳಿಂದ ಸ್ಥಳವನ್ನು ಪಡೆದು, ನಿವಾಸಕ್ಕೆ ಯೋಗ್ಯವಾದಂತ ಅತ್ಯುತ್ತಮ ಮನೆಯನ್ನು ನಿರ್ಮಿಸಿ ನೊಂದವರ ಬದುಕಿಗೆ ನೆರಳು ನೀಡುತ್ತಿದೆ. ನಮ್ಮ ಸಂಘಟನೆಯು ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಾ ಎಲ್ಲ ಜನತೆಗೆ ಆಸರೆಯಾಗುತ್ತಿದೆ ಎಂದು ಹೇಳಿದರು.
ಸದಾನಂದ ತಿಮ್ಮಾಪುರ ಮಾತನಾಡಿ ನಿರ್ಗತಿಕ ಕುಟುಂಬದವರಿಗಾಗಿ ಪೂಜ್ಯ ಧರ್ಮಾಧಿಕಾರಿಗಳು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಮಾಡುತ್ತಿರುವ ಜನಪರ ಕಾರ್ಯಕ್ರಮಗಳ ಮಾದರಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ರಾಜು ಎಸ್,ರೈತ ಮುಖಂಡ ಹಣಮಂತ ಗುಡೆಪ್ಪನವರ, ಗಜಾನನ ಮಡಿವಾಳರ, ಗಂಗಾಧರ ಗೋಲಭಾವಿ, PಏPS ಡೈರೆಕ್ಟರ್ ಕಾಮಣ್ಣ ಕೊಚಿ,ಪುಂಡಲಿಕಪ್ಪ ನಿಂಬಾಳಕರ,ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ಮಾಯಪ್ಪನವರ,ಮನೆ ಜಾಗದ ದಾನಿಗಳಾದ ಲಕ್ಷ್ಮಣ ಇಮ್ಮಡಿ ಕುಟುಂಬದವರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುವರ್ಣ ನಂದಿಕೋಲಮಠ ಮತ್ತು ಸೇವಾ ಪ್ರತಿನಿಧಿಗಳು,ಸಂಘದ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article