ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ ಪ್ರಮುಖ ಕಾರಣ – ಡಾ ದಡ್ಡಿ

MK HasiruKranti
ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ ಪ್ರಮುಖ ಕಾರಣ – ಡಾ ದಡ್ಡಿ
WhatsApp Group Join Now
Telegram Group Join Now

ಜಮಖಂಡಿ;ಉತ್ತಮ ಆರೋಗ್ಯ ಕ್ಕೆ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕ್ರಮಬದ್ಧವಾದ ಜೀವನ , ಧನಾತ್ಮಕ ಚಿಂತನೆಗಳು ಮಾನವನನ್ನು ಆರೋಗ್ಯವಂತನಾಗಿ ಇರಿಸುತ್ತವೆ ಎಂದು ಡಾ. ಎಚ್‌. ಜಿ. ದಡ್ಡಿ ಹೇಳಿದರು. ಬಿಎಲ್‌ಡಿಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತಾಗಬಾರದು. ನಮ್ಮ ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಹಾಗೂ ಆರೋಗ್ಯವನ್ನು ಚನ್ನಾಗಿಟ್ಟುಕೊಳ್ಳಬೇಕು, ನಿಯಮಿತ ಆಹಾರ ಸೇವನೆ, ವ್ಯಾಯಾಮ, ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಚನ್ನಾಗಿಟ್ಟು ಕೊಳ್ಳಬೇಕು ಆರೋಗ್ಯವೇ ಭಾಗ್ಯ ಎಂಬ ನಾನ್ನುಡಿಯಂತೆ ಎಲ್ಲರೂ ಆರೋಗ್ಯವಂತರಾಗಿದ್ದು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂಧು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ

ಪ್ರೊ.ಎಲ್‌.ಎಂ ಮಾರ್ಕಪನಳ್ಳಿ ಮಾತನಾಡಿದರು. ರೆಡ್‌ ಕ್ರಾಸ್‌ ವಿಭಾಗದ ಮುಖ್ಯಸ್ಥೆ ಪ್ರೊ. ಅಶ್ವಿನಿ ಅನಂತಪೂರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಪ್ರೇಮಾನಂದ ಹಿರೇಮಠ ವೇದಿಕೆಯಲ್ಲಿದ್ದರು. ಪ್ರಶಿಕ್ಷಣಾರ್ಥಿಗಳಾದ ಮೇಘಾ ಶಿರಗುಪ್ಪಿ, ನವೀನಕುಮಾರ ಬೆಳ್ಳುಬ್ಬಿ ಅನಿಸಿಕೆ ಹಂಚಿಕೊಂಡರು. ಪ್ರಶಿಕ್ಷಣಾರ್ಥಿ ಶ್ರುತಿ ಗುಡದಿ ಪ್ರಾರ್ಥನೆ, ಸಂಜನಾ ಬಾಡಗಿ ಸ್ವಾಗತ ಕೊರಿದರು, ವಿನಯ ಕಟ್ಟಿಮನಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ರಮೇಶ ಗೊಡಚಿ, ಸೃಷ್ಟಿ ಸಿಂಧೂರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಜಯಲಕ್ಷ್ಮಿ ಅಥಣಿ ವಂದನಾರ್ಪಣೆ ಮಾಡಿದರು.

WhatsApp Group Join Now
Telegram Group Join Now
Share This Article