ರೈತರು ಮಿಶ್ರ ಬೇಸಾಯ ಪದ್ದತಿಯ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು : ಯಾದವ

Pratibha Boi
ರೈತರು ಮಿಶ್ರ ಬೇಸಾಯ ಪದ್ದತಿಯ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು : ಯಾದವ
filter: 0; fileterIntensity: 0.000000; filterMask: 0; captureOrientation: 0; hdrForward: 5; shaking: 0.036562; highlight: 1; motionR: 65536; algolist: 0; multi-frame: 1; brp_mask: 8; brp_del_th: 0.0118,0.0000; brp_del_sen: 0.1300,0.0000; delta:1; bokeh:1; ispap:1; papproctime: 2026:04:07 12:35:12; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 173.21843;aec_lux_index: 0;albedo: ;confidence: ;motionLevel: 65537;weatherinfo: weather:null, icon:null, weatherInfo:100;temperature: 36;zeissColor: bright;
WhatsApp Group Join Now
Telegram Group Join Now

ರಾಮದುರ್ಗ: ಭಾರತ ಕೃಷಿ ಪ್ರಧಾನವಾದ ದೇಶ. ಶೇ.೭೦ ರಷ್ಟು ಕೃಷಿಕದ್ದಾರೆ. ಶೇ.೫೦ ರಷ್ಟು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಉದ್ಪಾದನೆಗೆ ಅನುಗುಣವಾಗಿ ಬೆಲೆ ಲಭಿಸುತ್ತದೆ. ಈ ಬಗ್ಗೆ ರೈತರು ಹೆಚ್ಚು ಗಮನ ಹರಿಸಬೇಕೆಂದು ಬೆಳಗಾವಿಯ ನಬಾರ್ಡ ಡಿ.ಡಿ.ಎಂ ಅಭಿನವ ಯಾದವ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಗೊಡಚಿ ಗ್ರಾಮದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಯ ಅರಭಾವಿ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಿಮ ಬಿ.ಎಸ್ಸಿ (ಹಾನ್ಸ್) ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬರದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾನಾಡಿದರು.
ರೈತರೆಲ್ಲರೂ ಏಕಕಾಲದಲ್ಲಿ ಒಂದೇ ಬೆಳೆಯನ್ನು ಬೆಳೆದರೆ ರೈತರಿಗೆ ಸೂಕ್ತ ಬೆಲೆ ದೊರೆಯುವದು ಕಷ್ಟ. ಹಾಗಾಗಿ ಮಿಶ್ರ ಬೇಸಾಯ ಪದ್ದತಿಯ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳನ್ನು ಬೆಲೆ ಸಿಗುವ ವರೆಗೆ ದಾಸ್ತಾನು ಮಾಡಿಕೊಳ್ಳಬೇಕು. ಕೃಷಿ ದಾಸ್ತಾನು ಮಾಡಿಕೊಳ್ಳಲು ನಬಾರ್ಡದಿಂದ ರಿಯಾಯತಿ ದರದಲ್ಲಿ ಗೋದಾಮುಗಳನ್ನು ನಿರ್ಮಿಸಿಕೊಳ್ಳಲು ಸಾಲ ನೀಡಲಾಗುತ್ತಿದೆ. ಇದರಿಂದ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯವಿದೆ ಎಂದು ಹೇಳಿದರು.
ಎಲ್.ಡಿ.ಎಂ ಪ್ರಶಾಂತ ಘೋಡಕೆ ಮಾತನಾಡಿ, ಕೃಷಿಯಲ್ಲಿ ಲಾಭ ಪಡೆದುಕೊಳ್ಳಲು ಕೃಷಿಯಲ್ಲಿ ತಂತ್ರಜ್ಞಾನವನ್ನು ಬೆಳೆಸಿಕೊಳ್ಳಬೇಕು. ಕೃಷಿ ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಗ್ರಾಮೀಣ ಭಾಗದ ರೈತರಿಗೆ ಕೃಷಿ ತಿಳುವಳಿಕೆ ನೀಡುವತ್ತ ಗಮನ ಹರಿಸಬೇಕೆಂದು ತಿಳಿಸಿದರು.
ಯುವ ಮುಖಂಡ ಅನಿತೇಕ ಪಟ್ಟಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಕ್ಕಲುತನದಲ್ಲಿ ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕೃಷಿ ಪದವಿ ಪಡೆದುಕೊಳ್ಳಲು ಮುಂದೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ವ್ಯವಸ್ಥಿತವಾಗಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡರೆ ಹೆಚ್ಚಿನ ಆಧಾಯ ನಿರೀಕ್ಷಸಬಹುದೆಂದು ತಿಳಿಸಿದರು.
ಅರಭಾವಿ ತೋಟಗಾರಿಗೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಆನಂದ ಮಾಸ್ತಿಹೊಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಖೋಡ, ಪ್ರಗತಿಪರ ರೈತ ಪ್ರಕಾಶ ಮುರಕಟ್ನಾಳ ಮಾತನಾಡಿದರು.
ಪಿ.ಡಿ.ಓ ಮಂಜುನಾಥ ದೇವರಡ್ಡಿ, ಕೃಷಿ ಅಧಿಕಾರಿ ರಮೇಶ ದಾಸರ, ಡಾ. ಆನಂದ ಗಸ್ತಿ, ಡಾ.ಪಲ್ಲವಿ ಜಿ, ಡಾ. ಎಸ್.ಜಿ.ಪ್ರವೀಣಕುಮಾರ, ಲಚ್ಚಪ್ಪ ಕಾಮನ್ನವರ, ಸಹಜಾನಂದ ಬಾವನ್ನವರ, ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುನಿತಾ ಪಟ್ಟೆದ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಿಂದ ತೋಟಗಾರಿಕೆ ವಸ್ತು ಪ್ರದರ್ಶನ ನಡೆಯಿತು. ಮಹ್ಮದ್ ರಿಯಾಜ್ ಸ್ವಾಗತಿಸಿದರು. ನಾಗವೇಣಿ ಕೆ. ನಿರೂಪಿಸಿದರು. ಪ್ರದೀಪ ಬಿ. ವಂದಿಸಿದರು.

 

WhatsApp Group Join Now
Telegram Group Join Now
Share This Article