ಭೂ ಒಡೆತನ ಯೋಜನೆ ಅಡಿ ದರ ಸಮಿತಿ ರಚಿಸಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ನೀಡಿ ; ಸಿ ಆನಂದ್ ಕುಮಾರ್ ಕುಡುತಿನಿ ಒತ್ತಾಯ 

MK HasiruKranti
ಭೂ ಒಡೆತನ ಯೋಜನೆ ಅಡಿ ದರ ಸಮಿತಿ ರಚಿಸಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ನೀಡಿ ; ಸಿ ಆನಂದ್ ಕುಮಾರ್ ಕುಡುತಿನಿ ಒತ್ತಾಯ 
WhatsApp Group Join Now
Telegram Group Join Now
 ಬಳ್ಳಾರಿ ಏಪ್ರಿಲ್ 07 : ಭೂ ಒಡೆತನ ಯೋಜನೆ ಅಡಿಯಲ್ಲಿ ಭೂಮಿಗಾಗಿ ಹಲವಾರು ಜನ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿ ಕಾರ್ಮಿಕರು ಅಲೆಮಾರಿಗಳು ಸೇರಿದಂತೆ   ಆದಿ ಜಾಂಬವ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ  ಅರ್ಜಿ ಗಳನ್ನು ಸಲ್ಲಿಸಿ ಎರಡು ವರ್ಷ ಕಳೆದರೂ ಭೂಮಿಯನ್ನು ಮಂಜೂರು ಮಾಡಿರುವುದಿಲ್ಲ ಜಿಲ್ಲಾಧಿಕಾರಿಗಳು ದರ ಸಮಿತಿಯನ್ನು ನಿಗದಿಪಡಿಸಿ ಕೂಡಲೇ ಭೂಮಿಯನ್ನು ಖರೀದಿಸಿ ಮಂಜೂರು ಮಾಡಬೇಕೆಂದು ಪ್ರಜಾ ಪರಿವರ್ತನೆ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಚಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿ ಆನಂದ್ ಕುಮಾರ್ ಕುಡುತಿನಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
 ಈ ಕುರಿತು ಅವರು ನೂರಾರು ಫಲಾನುಭವಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಮಾನ್ಯ ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲೆ ಕೋಪಗೊಂಡಂತಿದೆ ಕಳೆದ ಎರಡು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಭೂ ಒಡೆತನ ಯೋಜನೆ ಜಾರಿಗೊಳಿಸುವಲ್ಲಿ ನಿರ್ಲಕ್ಷವನ್ನು ತೋರುತ್ತಿದ್ದಾರೆ ಅರ್ಜಿದಾರರು ಪದೇ ಪದೇ ಮನವಿ ಮಾಡಿಕೊಂಡರು ಸಹ ಅವರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಇದರಿಂದಾಗಿ ಭೂ ಒಡೆತನ ಯೋಜನೆಗೆ ಜಮೀನನ್ನು ಮಾರಾಟ ಮಾಡುತ್ತಿರುವ ಖಾಸಗಿ ವ್ಯಕ್ತಿಗಳು ಈಗ ತಮ್ಮ ಭೂಮಿಯನ್ನು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಸಹ ಬರೆದಿದ್ದಾರೆ ಆದರೂ ಸಹ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಖೇದಕರ ವಿಷಯ ಎಂದ ಅನಂತ್ ಕುಮಾರ್ ಕುಡುತಿನಿ,  ಯಾರೋ ಖಾಸಗಿ ವ್ಯಕ್ತಿಗಳ ಸುಳ್ಳು ತಕರಾರು ಅರ್ಜಿಯನ್ನು ಪರಿಗಣಿಸಿ ಭೂ ಒಡೆತನ ಯೋಜನೆಯನ್ನು ನೆನೆಗುದಿಗೆ ಹಾಕಿದ್ದಾರೆ ಈ ದೂರು ಕೇವಲ ಕಪೋಲ ಕಲ್ಪಿತವಾಗಿದ್ದು ಯಾವುದೇ ಹುರುಳಿಲ್ಲ ಎಂದು ಈಗಾಗಲೇ ತನಿಖಾ  ಅಧಿಕಾರಿಗಳು ತಿಳಿಸಿದ್ದಾರೆ ಇದನ್ನು ಮಾನ್ಯ ಮಾಡಿ ಜಿಲ್ಲಾಧಿಕಾರಿಗಳು ತಕ್ಷಣ ದರ ಸಮಿತಿ ರಚಿಸಿ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
 ಈ ಪ್ರತಿಭಟನಾ ಧರಣಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಆದಿ ಜಾಂಬವ ಅಲೆಮಾರಿ ಜನಾಂಗ ಸಮುದಾಯದ ನೂರಾರು ಜನ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article