ದೆಹಲಿ, ಏಪ್ರಿಲ್.15: ಮದ್ಯನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಏಪ್ರಿಲ್ 23ರವರೆಗೆ ವಿಸ್ತರಿಸಿದೆ.
ಸೋಮವಾರ ಅರವಿಂದ್ ಕೇಜ್ರಿವಾಲ್ ಒಂದರ ಹಿಂದೆ ಒಂದು ಆಘಾತವನ್ನು ಎದುರಿಸಿದರು. ಮೊದಲು ಸುಪ್ರೀಂಕೋರ್ಟ್ ಕೇಜ್ರಿವಾಲ್ ಅರ್ಜಿಯನ್ನು ತಕ್ಷಣವೇ ಆಲಿಸಲು ನಿರಾಕರಿಸಿತು ಪ್ರಕರಣವನ್ನು ಏಪ್ರಿಲ್ 29ಕ್ಕೆ ಮುಂದೂಡಿತು. ನಂತರ ಅರ್ಧ ಗಂಟೆ ಬಳಿಕ ದೆಹಲಿ ಕೋರ್ಟ್ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23ರವರೆಗೆ ವಿಸ್ತರಿಸಿತು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ತಿಹಾರ್ ಜೈಲಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದರು. ಕಿಟಕಿಯ ಮೂಲಕ ಫೋನ್‌ನಲ್ಲಿ ಮಾತನಾಡುವಂತೆ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜೊತೆ ಮಾತನಾಡಿದ ಭಗವಂತ್ ಮಾನ್ ಭಾವುಕರಾದರು. ಅವರ ಕಣ್ಣುಗಳು ತುಂಬಿ ಬಂದವು. ಹೋಗಲು ಅವಕಾಶ ನೀಡುವಂತೆ ಕೇಜ್ರಿವಾಲ್‌ಗೆ ಮನವಿ ಮಾಡಿದರೂ ಜೈಲು ಅಧಿಕಾರಿಗಳು ಒಪ್ಪಲಿಲ್ಲ. ಇದರಿಂದಾಗಿ ಅವರ ಜೊತೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.