ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗುಳಿಪೇಟೆಯವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಶುರುವಾಗಿದೆ. ರಸ್ತೆ ಅಗಲೀಕರಣ ಮಾಡಿ ಎರಡು ಕಡೆ ಸಮನಾಗಿ ಮಾಡಿ ಆದರೆ ಇಲ್ಲಿ ಒಂದು ಕಡೆ ಬೆಣ್ಣೆ ಇನ್ನೊಂದು ಕಡೆ ಸುಣ್ಣ ಆಗಿದೆ ಇದು ಸರಿಯಲ್ಲ ಎಂದು. ಕರ್ನಾಟಕ ರಾಜ ರೈತ ಹಸಿರು ಸೇನೆಯ ತಾಲೂಕು ಅಧ್ಯಕ್ಷ ದೇವಪ್ಪ ಸೋಬಾನಾದ ಹೇಳಿದರು.
ಪಟ್ಟಣ ಪಂಚಾಯತ್ ಸಿಬ್ಬಂದಿ ಬಸವರಾಜ ಅವರಿಗೆ ಎರಡು ಬದಿ ರಸ್ತೆ ಅಗಲೀಕರಣ ಮಾಡಿ ಇಲ್ಲವೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿ ಮಾತನಾಡಿದ ಅವರು
ಮುಖ್ಯಾಧಿಕಾರಿಗಳು ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ ರಸ್ತೆ ಬದಿಯಲ್ಲಿ
ತೆರುವಗೊಳಿಸಿದ ಅಲ್ಲಿನ ನಾಗರಿಕರಿಗೆ ಯಾವುದೇ ಪರಿಹಾರ ಕೊಡುವ ಕೆಲಸ ಆಗಿಲ್ಲ, ಹಾಗೂ ಕೇವಲ ಒಂದು ಕಡೇ ಮಾತ್ರ ರಸ್ತೆ ತೆರುವ ಮಾಡುವ ಕೆಲಸ ಮಾಡುತ್ತಿದ್ದಾರೆ ಕೂಡಲೇ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳಿಸಬೇಕು ಇಲ್ಲಾ ಎರಡು ಬದಿ ಅಗಲೀಕರಣ ಮಾಡಿ ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ ಮಾತನಾಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಏಕ ಪಕ್ಷಿಯ ನಿರ್ಧಾರದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ, ಅಲ್ಲಿನ ನಿವಾಸಿಗಳ ಮೂಲ ಆಸ್ತಿ ಪರಿಶೀಲನೆ ಮಾಡಬೇಕು, ಕಾನೂನು ಬಾಹಿರ ಕೆಲಸ ಮಾಡುವುದನ್ನು ಬಿಟ್ಟು ಎರಡು ಬದಿ ರಸ್ತೆ ಅಗಲೀಕರಣ ಮಾಡಿದರೆ ಮಾತ್ರ ಅಭಿವೃದ್ಧಿಗೆ ಸಹಕಾರ ರೈತ ಸಂಘ ನೀಡುತ್ತದೆ ಇಲ್ಲವಾದರೆ ಪಟ್ಟಣ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ್ ನಾಡಗೌಡ, ಬಸಪ್ಪ ಲೊಳಗೊಂಡರ, ಮಲ್ಲಪ್ಪ ಚಳ್ಳಮರದ, ಶರಣಪ್ಪ ಚಂಡೂರು,
ಯಲ್ಲಪ್ಪ ಕಲಾಲ್, ನಾಗಪ್ಪ ಕಲ್ಮನಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಗಂಗಾಧರ್, ರುದ್ರಪ್ಪ ಕುಡ್ಲೂರು, ಹನುಮಪ್ಪ ಮರಡಿ, ರಾಮಣ್ಣ ಬಸಪ್ಪ ಸೇರಿದಂತೆ ಇತರರು ಇದ್ದರು.


