ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೇಡಿಟ್ ಸೋಸಾಯಿಟಿಗೆ 2,26,31,981 =೦೦ ರೂ ನಿವ್ವಳ ಲಾಭ

Pratibha Boi
ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೇಡಿಟ್ ಸೋಸಾಯಿಟಿಗೆ 2,26,31,981 =೦೦ ರೂ ನಿವ್ವಳ ಲಾಭ
Oplus_131072
WhatsApp Group Join Now
Telegram Group Join Now

ಯರಗಟ್ಟಿ: ಪಟ್ಟಣದ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೇಡಿಟ್ ಸೋಸಾಯಿಟಿಯು ೨೦೨೫-೨೬ ನೇ ಸಾಲಿನಲ್ಲಿ ನಿವ್ವಳ ೨,೨೬,೩೧,೯೮೧=೦೦ ರೂ ನಿವ್ವಳ ಲಾಭವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಬಳೇಶ್ವರ ಹಾದಿಮನಿ ತಿಳಿಸಿದರು.

ಕಳೆದ ಆರ್ಥಿಕ ವ?ಕ್ಕಿಂತ ಈ ವ? ೧೦% ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಅವರು ಸಂಘವು ಮೂರು ಶಾಖೆಗಳನ್ನು ಹೊಂದಿದ್ದು, ಸಂಘವು ೨ ಕೋಟಿ ೩೫ ಲಕ್ಷ ರೂ ?ರು ಬಂಡವಾಳ, ೭೩ ಕೋಟಿ ೩೬ ಲಕ್ಷ ರೂ ದುಡಿಯುವ ಬಂಡವಾಳ, ೮ ಕೋಟಿ ೮೧ ಲಕ್ಷ ರೂ. ಕಾಯ್ದಿಟ್ಟ ನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ಹಾಗೂ ೫೫ ಕೋಟಿ ೮೮ ಲಕ್ಷ ರೂ. ಸಾಲ ವಿತರಣೆ ಮಾಡಿದ್ದು, ೫೯ ಕೋಟಿ ೦೨ ಲಕ್ಷ ರೂ. ಠೇವುಗಳನ್ನು ಹೊಂದಿದೆ. ಸಂಘ ವ್ಯವಹಾರದ ಜೊತೆಗೆ ಸದಸ್ಯರಿಗೆ ಸೇಪ್ ಲಾಕರ್ ಸೇವೆ ಒದಗಿಸುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರುಸಂಘವು ಸದರಿ ವ?ದಲ್ಲಿ ೧೪ ಲಕ್ಷ ೧೯ ಸಾವಿರ ರೂ. ಕಟ್ಟಡ ಸವಕಳಿ ನಿಧಿ, ಮುಳುಗುವ ಸಾಲದ ನಿಧಿಗೆ ೧೦ ಲಕ್ಷ ರೂ ಮೀಸಲು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.ಕಳೆದ ಆರ್ಥಿಕ ವ? ೨೦೨೪-೨೫ ನೇ ಸಾಲಿನಲ್ಲಿ ಸದಸ್ಯರಿಗೆ ೨೫% ಡಿವಿಡೆಂಡ್ ವಿತರಣೆ ಮಾಡಿದ್ದು ಸಂಘವು ವ?ದಿಂದ ವ?ಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಕ್ಕೆ ಸದಸ್ಯರ, ನಿರ್ದೇಶಕ ಮಂಡಳಿ, ಶಾಖಾ ಸಲಹಾ ಸಮೀತಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಅತಿ ಅಮೂಲ್ಯವಾದದ್ದು ಎಂದು ಸಭೆಯಲ್ಲಿ ತಿಳಿಸಿದರು.

 

WhatsApp Group Join Now
Telegram Group Join Now
Share This Article