“ಅನುಬೋಧನಾ ಕಾರ್ಯಾಗಾರದಿಂದ ಪಡೆದ ಜ್ಞಾನ ಬೋಧನಾ ಸಮಯದಲ್ಲಿ ಸಹಕಾರಿಯಾಗಲಿದೆ”

Pratibha Boi
“ಅನುಬೋಧನಾ ಕಾರ್ಯಾಗಾರದಿಂದ ಪಡೆದ ಜ್ಞಾನ ಬೋಧನಾ ಸಮಯದಲ್ಲಿ ಸಹಕಾರಿಯಾಗಲಿದೆ”
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
WhatsApp Group Join Now
Telegram Group Join Now

ರಾಮದುರ್ಗ: ತರಬೇತಿ ಹಂತದಲ್ಲಿ ಅನುಬೋಧನಾ ಕಾರ್ಯಾಗಾರದಿಂದ ಪಡೆದ ಜ್ಞಾನ ಬೋಧನಾ ಸಮಯದಲ್ಲಿ ಸಹಕಾರಿಯಾಗಲಿದೆ. ಪ್ರಶಿಕ್ಷಣಾರ್ಥಿಗಳು ಅನುಬೋಧನೆಯ ಸಕಲ ಕೌಶಲ್ಯಗಳ ಜ್ಞಾನ ಪಡೆದುಕೊಳ್ಳಬೇಕು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಲ್. ಕುಳ್ಳೂರ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಇಡಿ ವಿದ್ಯಾರ್ಥಿಳಿಗೆ ಏರ್ಪಡಿಸಿದ ಅನುಬೋಧನಾ ಕಾರ್ಯಗಾರವನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಾಲೇಜಿನಲ್ಲಿ ಕಲಿಯುವ ವಿಷಯಗಳ ಜ್ಞಾನ ಬೋಧನಾ ಹಂತದಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಜ್ಞಾನ ನೀಡಲು ಸಹಕಾರಿಯಾಗುತ್ತದೆ ಎಂದರು.
ಡಾ.ಎನ್.ಎನ್. ವಾಳ್ವೇಕರ ಮಾತನಾಡಿ, ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುವ ಭಾವಿ ಶಿಕ್ಷಕರು, ವೃತ್ತಿ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ನೀಡಬೇಕಾದ ಜ್ಞಾನದ ಮಾಹಿತಿಯನ್ನು ನೀಡಲಾಗುತ್ತಿದೆ. ಪಠ್ಯ ವಿಷಯಗಳ ಜೊತೆಗೆ ಪ್ರಶಿಕ್ಷಣಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಮಖಾನಾ ಉಪಾಧ್ಯಕ್ಷ ಪ್ರೊ.ಜಿ.ಬಿ. ಬಟಕುರ್ಕಿ, ಪ್ರೊ.ಜಿ.ಪಿ. ಗಡದೆ, ಡಾ.ವ್ಹಿ.ಬಿ. ವಗ್ಗರ, ಪ್ರೊ. ಶಿವಲೀಲಾ ಗೋಲನ್ನವರ, ಭಾರತಿ ಪಮ್ಮಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ರಾಜು ಹಣಸಿ, ಅನುಷಾ ರೊಕ್ಕದಕಟ್ಟಿ ಸೇರಿದಂತೆ ಇತರರಿದ್ದರು.
ವಿದ್ಯಾರ್ಥಿನಿ ಸತ್ಯಕ್ಕ ಹೊಸಕೋಟಿ ಸ್ವಾಗತಿಸಿದರು. ತನುಜಾ ಹಿರೇಮಠ ನಿರೂಪಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article