ನೇಸರಗಿ. ಏಪ್ರಿಲ್ 9 ರಂದು ನಡೆಯಲಿರುವ ಬಾಗಲಕೋಟ ಉಪಚುನಾವಣೆ ಪ್ರಯುಕ್ತ ಬಾಗಲಕೋಟ ಕ್ಷೇತ್ರದ ಹಲವಾರು ಕಡೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರು ಮನೆ ಮನೆಗೆ ಬೇಟಿ ನೀಡಿ ಕಾಂಗ್ರೇಸ್ ಅಭ್ಯರ್ಥಿ ಪರ ಮಾತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ದಿ.ಮೇಟಿ ಅವರು ಅನೇಕ ಕೆಲಸಗಳನ್ನು ಮಾಡಿದ್ದು, ಅವರ ಪುತ್ರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದು ಅವರ ಗೆಲುವು ಖಚಿತ ಎಂದರು.
ಪ್ರಚಾರದ ವೇಳೆ ಬೆಳಗಾವಿ ಜಿಲ್ಲೆಯ ಅನೇಕ ಕಾಂಗ್ರೇಸ್ ನಾಯಕರು ಪಾಲ್ಗೊಂಡು ಬಿರುಸಿನ ಪ್ರಚಾರ ಮಾಡಿದರು.


