ಗದಗ : ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಗದಗ ನಗರದ ಬುದ್ಧಪ್ರೀಯ ಭಜನಾ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಗೌರವವನ್ನು ತಂದಿದೆ ಈ ಸಂದರ್ಭದಲ್ಲಿ. ತಂಡದ ಕಲಾವಿದರಾದ ಚಿದಾನಂದ ಅನವಾಳ, ಮಂಜು ಮಾದರ, ವೀರೇಶ ಮಾದರ, ಬಸುವರಾಜ ಬೆಲ್ಲದ, ಶಿವು ಮಾದರ, ಭೀಮಪ್ಪ, ಶಿವಪ್ಪ ಭಾಗವಹಿಸಿದ್ದರು. ವದಗನಾಳ ಗ್ರಾಮದ ಹಿರಿಯರು ಬುದ್ಧಪ್ರೀಯ ಭಜನಾ ಮಂಡಳಿಯ ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು.


