ಬಳ್ಳಾರಿ, ಏ.06.: ವಿಶ್ವ ಆರೋಗ್ಯ ದಿನದ ಅಂಗವಾಗಿ FPAI ಬಳ್ಳಾರಿ ಶಾಖೆಯ ವತಿಯಿಂದ ಗರ್ಭಿಣಿಯರಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಟಿ.ಜಿ. ವಿಠ್ಠಲ್ ವಹಿಸಿದ್ದರು.
FPAI ಅಧ್ಯಕ್ಷರಾದ ಶ್ರೀ ಟಿ.ಜಿ. ವಿಠ್ಠಲ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಲಿಂಗತಾರತಮ್ಯ ಮಾಡದೆ ಸಮಬಾಳ್ವೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
FPAI ಉಪಾಧ್ಯಕ್ಷರಾದ ಡಾ. ಚಂದನಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಗರ್ಭಿಣಿಯರ ಆರೈಕೆ ಕುರಿತು ಮಾಹಿತಿ ನೀಡಿ, ನಿಯಮಿತ ತಪಾಸಣೆ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ಥೈರಾಯ್ಡ್ ಪರೀಕ್ಷೆಯ ಮಹತ್ವವನ್ನು ವಿವರಿಸಿದರು. ಪೌಷ್ಟಿಕ ಆಹಾರ, ಸಮರ್ಪಕ ನಿದ್ರೆ ಮತ್ತು ವಿಶ್ರಾಂತಿ ಗರ್ಭಿಣಿಯರ ಆರೋಗ್ಯಕ್ಕೆ ಅತ್ಯಂತ ಅಗತ್ಯವೆಂದು ತಿಳಿಸಿದರು. ಜೊತೆಗೆ ಟಿಟಿ ಲಸಿಕೆ ಕಡ್ಡಾಯವಾಗಿ ಪಡೆಯುವುದು ಹಾಗೂ 2–3 ವರ್ಷಗಳ ಮಕ್ಕಳ ನಡುವಿನ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಎಸ್. ವಿಜಯಲಕ್ಷ್ಮಿ ಶಾಖಾ ವ್ಯವಸ್ಥಾಪಕರು FPAI ಅವರು ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ವಿಶ್ವ ಆರೋಗ್ಯ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟಾರೆ 50 ಗರ್ಭಿಣಿಯರು ಭಾಗವಹಿಸಿದ್ದರು ಕಾರ್ಯಕ್ರಮದ ನಂತರ ಅವರಿಗೆ ಸ್ಕ್ಯಾನಿಂಗ್ ಮತ್ತು ರಕ್ತ ಪರೀಕ್ಷೆ ಸೇವೆಗಳನ್ನು ನೀಡಲಾಯಿತು


