ಬಿಜೆಪಿ ಸ್ಥಾಪನಾ ದಿನ ಆಚರಿಸಿದ ಮಹಾನಗರ ಬಿಜೆಪಿ ಘಟಕ.

MK HasiruKranti
ಬಿಜೆಪಿ ಸ್ಥಾಪನಾ ದಿನ ಆಚರಿಸಿದ ಮಹಾನಗರ ಬಿಜೆಪಿ ಘಟಕ.
WhatsApp Group Join Now
Telegram Group Join Now
ಬೆಳಗಾವಿ.ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದ ಅಂಗವಾಗಿ ಇಂದು ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ವರಿಷ್ಠರು, ಪದಾಧಿಕಾರಿಗಳು, ಸಕ್ರೀಯ ಕಾರ್ಯಕರ್ತರೊಟ್ಟಿಗೆ 47 ನೇಯ ಸ್ಥಾಪನಾ ದಿನವನ್ನು ಭಾರತ ಮಾತೆ, ಡಾ ಶ್ಯಾಮ ಪ್ರಸಾದ ಮುಖರ್ಜಿ ಹಾಗೂ ಪಂ. ದೀನ ದಯಾಳ ಉಪಾಧ್ಯಾಯರಿಗೆ ಪುಷ್ಪನಮನಗಳನ್ನು ಅರ್ಪಿಸುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
      ಕಾರ್ಯಕ್ರಮದಲ್ಲಿ ಮಹಾನಗರ  ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಉಪಾಧ್ಯಕ್ಷರಾದ  ಮಹಾಂತೇಶ ವಕ್ಕುಂದ, ಹಿರಿಯರಾದ  ಎಂ ಬಿ ಜಿರಲಿ,ಉಪ ಮಹಾಪೌರ ಹಣಮಂತ ಕೊಂಗಾಲಿ, ರಾಜ್ಯ ಉಪಾಧ್ಯಕ್ಷರಾದ  ಅನೀಲ ಬೆನಕೆ,ಮುರುಗೇಂದ್ರಗೌಡ ಪಾಟೀಲ, ಉಜ್ವಲ ಬಣಜವಾಡ,  ಮಲ್ಲಿಕಾರ್ಜುನ ಹಳದಾರಮಠ, ವಿಜಯ ಕೊಡಗನೂರ ಸೇರಿದಂತೆ ಪಕ್ಷದ ವರಿಷ್ಠರು, ಪದಾಧಿಕಾರಿಗಳು, ಸಕ್ರೀಯ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article